ಪದವಿಯೊಂದಿಗೆ ಕೌಶಲ್ಯಗಳ ಕಲಿಕೆ ಮುಖ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.22 : ಪದವಿ ಶಿಕ್ಷಣದ ಕಲಿಕೆಯೊಂದಿಗೆ    ವಿದ್ಯಾರ್ಥಿಗಳು ಅದಕ್ಕೆ ಪೂರಕವಾದ ಕೌಶಲ್ಯಗಳನ್ನು ಕಲಿತಾ ಹೋದಾಗ ಉತ್ತಮ ಉದ್ಯೋಗ ಪಡೆದು ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸಂಚಾಲಕರಾದ ಪ್ರೊ ವೆಂಕಟೆಶ್ ಬಾಬು  ಹೇಳಿದರು.ಅವರು  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ   ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಪ್ಲೇಸ್ಮೆಂಟ್ ಸೆಲ್ ವತಿಯಿಂದ  ಉನ್ನತಿ ಫೌಂಡೇಶನ್ ಸಹಯೋಗದೊಂದಿಗೆ 30 ದಿನಗಳ ಕೌಶಲ್ಯಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಇಂದು ಪದವಿ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯವೋ ಅದರೊಂದಿಗೆ ಕೌಶಲ್ಯಗಳನ್ನು ಕಲಿಯುವುದು ಅಷ್ಟೇ ಮುಖ್ಯವಾಗಿದೆ ಉತ್ತಮ ಕೌಶಲ್ಯಗಳನ್ನು ಕಲಿತಾಗ ಉತ್ತಮವಾದ ಉದ್ಯೋಗ ಸಿಗುವ ಭರವಸೆ ನಿಮ್ಮಲ್ಲಿ ಮೂಡುತ್ತದೆ. ಉನ್ನತಿ ಫೌಂಡೇಶನ್ ನವರು ನಮ್ಮ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಸತತವಾಗಿ  ನಡೆಸುತ್ತಾ ಬಂದಿರೋದು ಶ್ಲಾಘನೀಯ ಇತರಹದ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಜಮೋಹನ್ ಎನ್ ಆರ್ ರವರು ಮಾತನಾಡಿ ಕೌಶಲ್ಯಗಳು ಜೀವನದ ಮುಖ್ಯವಾದ ಅಂಗವಾಗಿವೆ ಅವುಗಳನ್ನು ಗಳಿಸಿಕೊಂಡಾಗ ಉತ್ತಮವಾದ ರೀತಿಯಲ್ಲಿ ಬದುಕಬಹುದು ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾದ ಪವನ್ ಹಾಗೂ ಅಪೂರ್ವ ರವರು ಮಾತನಾಡುತ್ತಾ ತಮ್ಮ ಸಂಸ್ಥೆಯು ಸಾಮಾಜಿಕ ಕಾಳಜಿಯಿಂದ ಹಾಗೂ ವಿದ್ಯಾರ್ಥಿಗಳ ಏಳಿಗೆಯ ದೃಷ್ಟಿಯಿಂದ ಸರ್ಕಾರಿ ಕಾಲೇಜಿನಲ್ಲಿ ಈ ತರಹದ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುತ್ತದೆ ಎಂದು ಹೇಳಿದರು.