ಪದವಿಧರ ಪ್ರಾಥಮಿಕ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ: ಗುರು ಸರ್ವೋತ್ತಮ್ ಪ್ರಶಸ್ತಿ ಪ್ರದಾನ

ಕಲಬುರಗಿ:ಫೆ.16: ನಗರದ ವಿಜಯ್ ವಿದ್ಯಾಲಯದ ಎದುರುಗಡೆ ಇರುವ ಬಂಜಾರಾ ಭವನದಲ್ಲಿ ಇದೇ ಫೆಬ್ರವರಿ 18ರಂದು ಬೆಳಿಗ್ಗೆ ಹತ್ತು ಗಂಟೆಗೆ ಪದವಿಧರ ಶಿಕ್ಷಕರಿಗೆ ಸ್ವಾಗತ ಸಮಾರಂಭ ಹಾಗೂ ಕೆಸಿಎಸ್‍ಆರ್ ನಿಯಮಗಳ ಕುರಿತು ಶೈಕ್ಷಣಿಕ ಕಾರ್ಯಾಗಾರ ಮತ್ತು ಜಿಲ್ಲಾ ಮಟ್ಟದ ಗುರು ಸರ್ವೋತ್ತಮ್ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ (6-8) ಪದವಿಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಎಸ್.ಜೆ. ಇನಾಮದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರು ನೆರವೇರಿಸುವರು. ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡುವರು. ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್ ಅವರು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಮತ್ತು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು ಎಂದರು.
ಸಂಘದ ರಾಜ್ಯಾಧ್ಯಕ್ಷ ಮುರಳಿಧರ್ ಪಿ., ಅವರು ಅಧ್ಯಕ್ಷತೆಯನ್ನು ವಹಿಸುವರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ್, ಕಮಲಾಪುರ ಡಯಟ್ ಸಂಸ್ಥೆಯ ಉಪ ನಿರ್ದೇಶಕಿ ಶ್ರೀಮತಿ ಬಸಂತಿಬಾಯಿ ಡಿ. ಅಕ್ಕಿ, ಸಂಘದ ರಾಜ್ಯಾಧ್ಯಕ್ಷ ಪಿ. ಮುರಳಿಧರ್, ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷ ಯಲ್ಲಪ್ಪಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ರಾಜ್ಯ ಖಜಾಂಚಿ ಶಂಕರ್ ಕೆ.ಎನ್., ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಧರ್ ಭಾವಿಕಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಚಂದ್ರಕಾಂತ್ ಪಿ. ತಳವಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಹೂಗಾರ್, ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಧರ್ಮಣ್ಣ ಜವಳಿ, ಶ್ರೀಮತಿ ಸೇವಂತಾ ಪಿ. ಚವ್ಹಾಣ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಫಜಲಪುರದ ಹಾಜಿ ಮಲಂಗ್ ಇಂಡಿ, ಆಳಂದ್‍ನ ಹಣಮಂತ್ ರಾಠೋಡ್, ಚಿಂಚೋಳಿಯ ಶ್ರೀಮತಿ ಕಮಲಾ ಕುಲಕರ್ಣಿ, ಚಿತ್ತಾಪುರನ ಸಿದ್ಧವೀರಯ್ಯ ರುದ್ನೂರ್, ಜೇವರ್ಗಿಯ ಮದರಖಾನ್ ಪಠಾನ್, ದಕ್ಷಿಣದ ವಿಜಯಕುಮಾರ್ ಜಮಖಂಡಿ, ಉತ್ತರದ ಸೋಮಶೇಖರ್ ಹಂಚನಾಳ್, ಸೇಡಂದ ಮಾರುತಿ ಹುಜರಾತಿ ಅವರು ಆಗಮಿಸುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಹಾದೇವ್ ಚಿತಲಿ, ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಧರ್ ಭಾವಿಕಟ್ಟಿ ಅವರು ಉಪಸ್ಥಿತರಿದ್ದರು.