ಪದವಿಧರೇತರ ಮುಖ್ಯಗುರುಗಳ ಸಂಘ ರಚನೆ

ಸಿರವಾರ.ಜ.೧೪- ಪಟ್ಟಣದ ಪಿಡಬ್ಲ್ಯೂಡಿ ಕ್ಯಾಂಪಿನ ಶಾಲೆಯಲ್ಲಿ ಪದವಿಧರೇತರ ಬಡ್ತಿ ಮುಖ್ಯಗುರುಗಳ ಸಂಘದ ರಚನೆ ಕಾರ್ಯಕ್ರಮವು ಜರುಗಿತು.
ಗೌರವ ಅಧ್ಯಕ್ಷರಾಗಿ ಮಲ್ಲಪ್ಪ ಚಾಗಭಾವಿ, ಅಧ್ಯಕ್ಷರಾಗಿ ರಾಜಾಸಾಬ,ಪ್ರ.ಕಾ ಗೋಪಾಲ,ಖಜಾಂಚಿಯಾಗಿ ಅಯ್ಯನಗೌಡ,ಉಪಾಧ್ಯಕ್ಷರಾಗಿ ಪಂಪಾರೆಡ್ಡಿ, ಚೆನ್ನಪ್ಪದೊರೆ,ನರಸಮ್ಮ, ಕಾನೂನು ಸಲಹೆಗಾರರ ರುದ್ರಪ್ಪ , ಕಂವಳಾಪ್ಪ, ಇಸ್ಮಾಯಿಲ್,ನೀಲಮ್ಮ,ರಾಮನಗೌಡ,ನರಸಮ್ಮ ಗೊಲದಿನ್ನಿ, ಆರಿಫ್ ಮಿಯಾ, ಹನುಮಂತಪ್ಪ,ಶಿವಲಿಂಗಮ್ಮ,ಪಾರ್ವತಿ,ತಿರುಪತಿ,ಬಸವಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅಯ್ಯನಗೌಡ ಏರೇಡ್ಡಿ ಅವರು ಆಗಮಿಸಿ ನೂತನವಾಗಿ ಆಯ್ಕೆಯಾದವರಿಗೆ ಶುಭಾಶಯ ತಿಳಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಮೌನೇಶ ಹಣಗಿ, ಜಾವೀದ್ ಪಾಷ, ಬಸವರಾಜ, ತಿರುಮಲದಾಸ, ತಿಮ್ಮಣ್ಣಬಲ್ಲಟಗಿ,ರಾಘವೇಂದ್ರ,ವೆಂಕಟೇಶ ಜಾಲಾಪೂರು, ಸೇರಿದಂತೆ ಇನ್ನಿತರರು ಇದ್ದರು.