ಪದಗ್ರಹಣ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮಾಜಿ ಶಾಸಕ ತೇಲ್ಕೂರ ಕರೆ

ಸೇಡಂ,ಮಾ, 02: ಬಿಜೆಪಿ ಪಕ್ಷದ ತಾಲೂಕಾ ಮಂಡಲ ನೂತನ ಅಧ್ಯಕ್ಷರಾಗಿ ಶಿವಶರಣಪ್ಪ ಶಂಕರ ನಿಡಗುಂದಾ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ವಿರೇಶ ಹೂಗಾರ, ತಿರುಪತಿ ಶಾಹಬಾದಕರ್ ಮದಕಲ್ ಪದಗ್ರಹಣ ಕಾರ್ಯಕ್ರಮವನ್ನು ಪಟ್ಟಣದಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಾಳೆ ( 03/03/2024) ಮದ್ಯಾಹ್ನ 3 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದರು ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.ಈ ಕಾರ್ಯಕ್ರಮಕ್ಕೆ ಜಿಲ್ಲಾದ್ಯಕ್ಷರಾದ
ಶಿವರಾಜ ಪಾಟೀಲ ರದ್ದೇವಾಡಗಿ, ಸಂಸದರಾದ ಡಾ. ಉಮೇಶ ಜಾಧವ,ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಶಾಸಕರಾದ ಬಸವರಾಜ ಮತ್ತಿಮೂಡ ಸೇರಿದಂತೆ ನಗರ ಜಿಲ್ಲಾ ಅದ್ಯಕ್ಷರು ಶಾಸಕರು ವಿಧಾನ ಪರಿಷತ್ತು ಸದಸ್ಯರು,ಮಾಜಿ ಶಾಸಕರು ಆಗಮಿಸುತ್ತಿದ್ದು ಪಕ್ಷದ ಹಿರಿಯ ಮುಖಂಡರು ,ಮಂಡಲ ಮತ್ತು ವಿವಿಧ ಮೋರ್ಚಾಗಳ ಪದಾಧಿಕಾರಿಗಳು,ಜಿಲ್ಲಾ ಪಂ ಮತ್ತು ತಾಲೂಕು ಪಂ ಸದಸ್ಯರು, ಪುರಸಭಾ ಮತ್ತು ಗ್ರಾಮ ಪಂಚಾಯತ್ ಸದಸ್ಯರು,ಬೂತ್ ಅಧ್ಯಕ್ಷರು ಮತ್ತು ಪ್ರಮುಖರು,ಯುವಕರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.