ಪದಗ್ರಹಣ ಮಾಡಿದ ಕುರೇಕುಪ್ಪ ಪುರಸಭೆ ನೂತನ ಅಧ್ಯಕ್ಷ ಉಪಾಧ್ಯಕ್ಷರು

ಸಂಡೂರು ನ 0 6: ತಾಲೂಕಿನ ಕುರೇಕುಪ್ಪ ಪುರಸಭೆಯ 23 ಸದಸ್ಯರ ಬಲವನ್ನು ಹೊಂದಿದ್ದು ಇದರಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯಾರ್ಥಿಗಳಾದ ಆಶಾಬೀ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರೆ ಉಪಾಧ್ಯಕ್ಷರಾಗಿ ನಾಗವೇಣಿ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು ಮಾತನಾಡಿ ಜನಪ್ರತಿನಿಧಗಳು ಮಾಡುವಂತಹ ಪ್ರಮುಖ ಕಾರ್ಯಕ್ರಮಗಳು ಮತ್ತು ಸಾರ್ವಜನಿಕರ ಹಿತ ಕಾಪಾಡುವಲ್ಲಿ ಪುರಸಭೆ ಕೈಗೊಳ್ಳಬೇಕಾದ ಅಂಶಗಳನ್ನು ತಿಳಿಸಿದರು.
ಅಲ್ಲದೆ ಮುಖ್ಯವಾಗಿ ಸಾರ್ವಜನಿಕರಿಗೆ ಬೇಕಾಗುವ ಮೂಲಭೂತಸೌಲಭ್ಯಗಳ ನಿರ್ವಹಣೆ, ಅದರಲ್ಲೂ ಚರಂಡಿ, ಕುಡಿಯುವ ನೀರು, ಬೀದಿ ದೀಪ, ರಸ್ತೆ, ಕಸದ ವಿಲೇವಾರಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಸಾರ್ವಜನಕರ ಹಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿ ಅಭಿವೃದ್ದಿ ಮಾಡಲಾಗುವುದು ಎಂದರು.