ಪದಕ ವಿತರಣೆ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಅ21: ಕಲ್ಪವೃಕ್ಷ ಮಾದರಿ ಶಾಲೆ ಹಾಗೂ ಸಿ.ಬಿ.ಎಸ್.ಇ. ನವದೆಹಲಿ ಇವರ ಜಂಟಿ ಸಹಯೋಗದಲ್ಲಿ ದಕ್ಷಿಣ ವಲಯ 2 (ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳ) ಟೈಕ್ವಾಂಡೊ ಟೂರ್ನಾಮೆಂಟ್‍ದಲ್ಲಿ 14 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಥಾನ ವಿಜೇತರಿಗೆ ಶುಕ್ರವಾರ ಸಂಜೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಾ. ಶರಣಕುಮಾರ ಅಂಗಡಿ ಹಾಗೂ ಪ್ರಾಚಾರ್ಯ ಹನಮೇಶ ದುಡ್ಯಾಳ ಕ್ರೀಡಾಪಟುಗಳಿಗೆ ಪದಕಗಳನ್ನು ವಿತರಿಸಿದರು. ಟೂರ್ನಾಮೆಂಟ್ ನಿರ್ದೇಶಕ ಶ್ರೀಪಾದ ರಾವ್, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ, ದೈಹಿಕ ಶಿಕ್ಷಕ ಸಂತೋಷ ವನಕಿ, ಬಸವರಾಜ ಕಾದ್ರೊಳ್ಳಿ, ಶಿಕ್ಷಕ ಬಳಗ ಹಾಗೂ ನಾಲ್ಕು ರಾಜ್ಯಗಳ ಕ್ರೀಡಾಪಟುಗಳು, ತರಬೇತುದಾರರು ಉಪಸ್ಥಿತರಿದ್ದರು.