ಪಥ ಸಂಚಲನ: ಸಾರ್ವಜನಿಕರಲ್ಲಿ ಜಾಗೃತಿ

ಬಾದಾಮಿ,ಏ12: ಬರುವ ಮೇ 10 ರಂದು ಜರುಗಲಿರುವ 2023ನೇ ಸಾಲಿನ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಿರಲಿ ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಯೋಚಿಸಿದ ಎಸ್.ಎಸ್.ಬಿ. ಪಶ್ಚಿಮ ಬಂಗಾಲದ ಸಶÀಸ್ತ್ರ ಸೇನಾಪಡೆ ಹಾಗೂ ಪೋಲಿಸ್ ಇಲಾಖೆಯಿಂದ ಕೇಂದ್ರ ಸರಕಾರದ ಸೇನಾಪಡೆ ಮತ್ತು ರಾಜ್ಯ ಸರಕಾರದ ಪೋಲಿಸ್ ಪಡೆ ಪಟ್ಟಣದ ಪ್ರಮುಖ ರಸ್ತಗಳಲ್ಲಿ ಮತ್ತು ಪ್ರತಿಯೊಂದು ಬಡಾವಣೆಗಳಲ್ಲಿ ಮಂಗಳವಾರ ಪಥ ಸಂಚಲನ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಪಥ ಸಂಚಲನವು ಪಟ್ಟಣದ ಪಿಕಾರ್ಡ ಬ್ಯಾಂಕ್ ಆವರಣದಿಂದ ಆರಂಭಗೊಂಡು ಟಾಂಗಾ ಸ್ಟ್ಯಾಂಡ್ ವೃತ್ತ, ಪುಲಕೇಶಿ ವೃತ್ತ, ಅಂಬೇಡ್ಕರ ಸರ್ಕಲ್, ನೇಕಾರ ಓಣಿ, ಪಟ್ಟಣದ ಓಣಿ, ಶರಾಫ ಬಜಾರ, ಆನಂದನಗರ, ಚಾಲುಕ್ಯನಗರ, ಲಕ್ಷ್ಮೀ ನಗರ ಸೇರಿದಂತೆ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪೋಲಿಸ್ ಠಾಣೆಗೆ ಆಗಮಿಸಿದರು.
ನಗರದ ಯುವಕರು ಹಿರಿಯರು ಗಣ್ಯರು ಸೇರಿ ರಸ್ತೆ ಉದ್ದಗಲಕ್ಕೂ ರಂಗೋಲಿಯನ್ನು ಬಿಡಿಸಿ ಮಹಿಳೆಯರು ಯೋಧರಿಗೆ ಮಾಲೆ ಹಾಕಿದರು. ಕೆಲವು ಬಡಾವಣೆಗಳಲ್ಲಿ ಯೋಧರ ಪ್ರಮುಖರನ್ನು ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವಿಸಿದರು. ಸಿಪಿಐ ಡಿ.ಡಿ.ಧೂಳಖೇಡ, ಮಾತನಾಡಿ ಚುಣಾವಣೆ ದಿನ ಮತದಾರರು ಯಾವುದೆ ಭಯವಿಲ್ಲದೆ ಆಗಮಿಸಿ ತಮ್ಮ ಮತವನ್ನು ಚಲಾಯಿಸಿ ಯಾವತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇನಾ ಪಡೆ ಮತ್ತು ಪೋಲಿಸ್ ಇಲಾಖೆ ತಮ್ಮ ಸೇವೆಗಾಗಿ ಕೆಲಸವನ್ನು ಮಾಡುತ್ತೇವೆ ತಮಗೆ ಗೊತ್ತಿರುವ ಹಾಗೆ ಎಲ್ಲಿಯಾದರು ತಮ್ಮ ಕಣ್ಣಿಗೆ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ತಿಳಿಸಿ ಅದರ ಮುಂದಿನ ಕ್ರಮವನ್ನು ನಾವು ತೆಗೆದುಕೊಳ್ಳುತ್ತೇವೆ ಯಾವುದೆ ಲಂಚಕ್ಕೆ ಒಳಗಾಗದೆ ತಮ್ಮ ಅಮೂಲ್ಯವಾದ Àಮತವನ್ನು ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಕಮಾಂಡೂ ಮುಖ್ಯಸ್ಥ ಆನಂದ ಕುಮಾರ ಪಿ.ಎಸ್.ಐ ನಿಂಗಪ್ಪ ಪೂಜಾರಿ, ವಿಠ್ಠಲ ನಾಯಕ ಸೇನಾಪಡೆ ಮುಖ್ಯಸ್ಥರು ಪೋಲಿಸ್ ಸಿಬ್ಬಂದಿ ನಗರದ ಗಣ್ಯರಾದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಕಾಚಟ್ಟಿ, ಡಾ.ಬಸವರಾಜ ಗಂಗಲ, ನಾಗರಾಜ ಕಡಗದ ಡಾ.ಸತೀಶ ಕಟಗೇರಿ, ಬೇಲೂರಪ್ಪ ವಡ್ಡರ, ರಾಘು ದಯಾಪುಲೆ, ಲೊಕೇಶ ಕೆಂಚನಗೌಡ ಸೇರಿದಂತೆ ಯುವಕರು ಮಹಿಳೆಯರು ಭಾಗವಸಿದ್ದರು.