ಪಥಸಂಚಲನ:ಸೆಂಟ್ರಲ್ ಶಾಲೆ ಪ್ರಥಮ

ಕೋಲಾರ,ಆ.೧೮: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಸುವರ್ಣ ಸೆಂಟ್ರಲ್ ಶಾಲೆಗೆ ಪ್ರಥಮ ಬಹುಮಾನ ಲಭಿಸಿದೆ.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ.ಕೆ.ಪುರುಷೋತ್ತಮ್, ಪ್ರಾಂಶುಪಾಲೆ ಸರೋಜ, ಮುಖ್ಯೋಪಾಧ್ಯಾಯ ಶಾಹಿದ್ದೀನ್, ದೈಹಿಕ ಶಿಕ್ಷಕ ಡೇವಿಡ್ ರವಿಕುಮಾರ್ ಪ್ರಶಸ್ತಿ ಪಡೆದು ಮಕ್ಕಳನ್ನು ಅಭಿನಂದಿಸಿದರು.