ಪತ್ರಿಕೋದ್ಯಮ ವೃತ್ತಿಯ ಮೂಲ ಉದ್ದೇಶ, ಆಶಯ ಬದಲಾಗಬಾರದು : ಹಿರಿಯ ಪತ್ರಕರ್ತ ಹೂಗಾರ

ವಿಜಯಪುರ,ಜು.24:ಪತ್ರಿಕೋದ್ಯಮ ವೃತ್ತಿಯ ಮೂಲ ಉದ್ದೇಶ ಮತ್ತು ಆಶಯ ಎಂದಿಗೂ ಬದಲಾಗಬಾರದು ಸಮಾಜದಲ್ಲಿ ತಾಯಿಯ ಪಾತ್ರವನ್ನು ಪತ್ರಕರ್ತರು ನಿರ್ವಹಿಸಬೇಕು ಎಂದು ಹಿರಿಯ ಪತ್ರಕರ್ತ ಸುಭಾಷ ಹೂಗಾರ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚಾರಣೆ ವಾರ್ಷಿಕ ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾಜದ ತಾಯಿಯಾಗಿ ಕೆಲಸ ಮಾಡಬೇಕಾದ ಮಾಧ್ಯಮಗಳು ಇಂದು ಪರಸ್ಪರ ಪೈಪೆÇೀಟಿಯಲ್ಲಿ ತೊಡಗಿ ತಮ್ಮ ಮೂಲ ಆಶಯ, ಧ್ಯೇಯವನ್ನೇ ಮರೆಯುತ್ತಾ ಸಾಗಿದೆ, ಮೂಲ ಆಶಯಗಳೇ ಸೊರಗುತ್ತಿದೆ ಎಂದು ವಿಷಾದಿಸಿದರು.
ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದು ಹೇಳಲಾಗುವ ಪತ್ರಿಕಾರಂಗ ವಿಫಲವಾಗಿ ವಿಶ್ವದಾಧ್ಯಂತ ಈಗ ಐದನೇ ಅಂಗವಾಗಿ ಸ್ವತಂತ್ರ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಖಡ್ಗಕ್ಕಿಂತ ಹರಿತವಾದ ಲೇಖನಿ ಇಂದು ಹರಿತ ಕಡಿತಗೊಳಿಸಿಕೊಳ್ಳುತ್ತಿದೆ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿಯ ಪರಿಣಾಮ ಸಹ ಬೀರುತ್ತಿಲ್ಲ, ಇದಕ್ಕೆ ಸಮಾಜ ಕಾರಣವಲ್ಲ, ನಮ್ಮ ವೃತ್ತಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸದ ಪರಿಣಾಮವಾಗಿ ಈ ವಿದ್ಯಮಾನ ಸೃಜಿಸಿದೆ, ಇದಕ್ಕೆ ನಾವೇ ಹೊಣೆ ಎಂದು ಮಾರ್ಮಿಕವಾಗಿ ನುಡಿದರು.
ಎಲ್ಲ ವಲಯಗಳಲ್ಲೂ ಮೌಲ್ಯಗಳ ಅಂಧಃಪತನವಾಗುತ್ತದೆ, ಆದರೆ ಮಾಧ್ಯಮ ವಲಯದಲ್ಲಿ ಈ ಅಂಧಃಪತನ ದೊಡ್ಡ ವೇಗ ಪಡೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.
ನಾಲ್ಕನೇಯ ಸ್ತಂಭ ಜವಾಬ್ದಾರಿ ನುಣುಚಿಕೊಂಡಾಗ ಈಗ ಐದನೇಯ ಸ್ತಂಭ ಕಾರ್ಯಾರಂಭಕ್ಕೆ ಅಣಿಯಾಗುತ್ತಿದೆ, ಪತ್ರಕರ್ತರು ಮಾಧ್ಯಮ ಸಂಸ್ಥೆಗಳಿಂದ ಹೊರಬಂದು ಸ್ವತಂತ್ರ ವಿಚಾರಧಾರೆಯೊಂದಿಗೆ ಜನಾಭಿಪ್ರಾಯ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿz್ದÁರೆ, ಈ ತೆರನಾದ ಮಾಧ್ಯಮಗಳು ಹೆಚ್ಚಾಗುತ್ತಿದೆ, ಈ ನವ ಮಾಧ್ಯಮಗಳು ಸತ್ಯ ಪ್ರತಿಪಾದನೆಯ ಫಲವಾಗಿ ಈ ಜನಪ್ರಿಯತೆ ಪಡೆದುಕೊಳ್ಳುತ್ತಿವೆ ಎಂದರು.
ಮಾಧ್ಯಮಗಳು ಖಾಯಂ ಪ್ರತಿ ಪP್ಷÀವಾಗಿ ಕಾರ್ಯನಿರ್ವಹಿಸಬೇಕು ಹೊರತು ಮಾಧ್ಯಮಗಳು ಆಡಳಿತ ಪP್ಷÀಗಳ ರೀತಿ ವರ್ತನೆ ಬದಲಾಯಿಸಿಕೊಂಡಿದೆ. ಈಗ ಮಾಧ್ಯಮ ವಲಯ ಆತ್ಮಾವಲೋಕನಕ್ಕೆ ಸಕಾಲ ಎಂದರು.