ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪುಟ ವಿನ್ಯಾಸ ಕಲಿಕೆಯ ಕೌಶಲ್ಯ ಅಗತ್ಯ:ರಾಕೇಶ್

ಬಳ್ಳಾರಿ, ಮಾ.26: ಪತ್ರಿಕೋದ್ಯಮದ ವಿದ್ಯಾರ್ಥಿಗಳಾದವರು ಸುದ್ದಿಯನ್ನು ಬರೆಯುವ, ಓದುವ ಹಾಗೇ ಪತ್ರಿಕೆ ಪುಟ ವಿನ್ಯಾಸದ ಕೌಶಲ್ಯದ ಕಲೆ ಸಹ ಹೊಂದಿರಬೇಕು ಇದರಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಪುಟ ವಿನ್ಯಾಸಕ ರಾಕೇಶ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ನಿನ್ನೆ ನಗರದ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪುಟ ವಿನ್ಯಾಸ ಸಾಫ್ಟ್‍ವೇರ್ ಕುರಿತ ವಿಶೇಷ ಪ್ರಾಯೋಗಿಕ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು.
ಪತ್ರಿಕೋದ್ಯಮದ ವಿದ್ಯಾರ್ಥಿಗಳಾದವರು ಸುದ್ದಿಯನ್ನು ಬರೆಯುವ, ಓದುವ ಹಾಗೇ ಪತ್ರಿಕೆ ಪುಟ ವಿನ್ಯಾಸದ ಕೌಶಲ್ಯದ ಕಲೆ ಸಹ ಹೊಂದಿರಬೇಕು ಇದರಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಪುಟ ವಿನ್ಯಾಸಕ ರಾಕೇಶ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಪುಟ ವಿನ್ಯಾಸ ಮತ್ತು ಅದರ ಕೌಶಲಗಳ ಬಗ್ಗೆ ಪ್ರಾಯೋಗಿಕವಾಗಿ ಉಪನ್ಯಾಸವನ್ನು ನೀಡಿ, ವಿದ್ಯಾರ್ಥಿಗಳಿಂದ ಪುಟ ವಿನ್ಯಾಸ ಮಾಡಿಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ರಾಕೇಶ್ ವಿ.ತಾಳಿಕೋಟಿ, ಅತಿಥಿ ಉಪನ್ಯಾಸಕ ಗಿರೀಶ್ ಕುಮಾರ್‍ಗೌಡ, ವಿದ್ಯಾರ್ಥಿಗಳಾದ ಮಾಬು ಸುಭಾನ್, ಗೌಸಿಯ ಬೇಗಂ, ರವಿ ಕುಮಾರ್, ಲಕ್ಷ್ಮಣ, ಹುಲುಗಪ್ಪ, ಸಿ. ಸುರೇಶ್, ಶ್ರೀಕಾಂತ್, ಪೀರಾಸಾಬ್, ಸಂತೋಷ, ರಾಜಸಾಬ್, ಎ. ಲಿಂಗಯ್ಯ, ಬಿ.ಸುರೇಶ್ ಹಾಜರಿದ್ದರು.