ಪತ್ರಿಕೋದ್ಯಮದಲ್ಲಿ ಪ್ರಾಯೋಗಿಕ ಜ್ಞಾನ ಅಗತ್ಯ

ಕಲಬುರಗಿ:ಫೆ.29:ಪತ್ರಿಕೋದ್ಯಮದಲ್ಲಿ ವೃತ್ತಿಪರತೆಗಾಗಿ ತರಗತಿಯ ಬೋಧನೆಯೊಂದಿಗೆ ಕ್ಷೇತ್ರ ಕಾರ್ಯದ ಮೂಲಕ ಪ್ರಾಯೋಗಿಕ ಜ್ಞಾನ ಪಡೆಯುವುದು ತುಂಬಾ ಅಗತ್ಯವಾಗಿದೆ” ಎಂದು ಪತ್ರಕರ್ತ ಮತ್ತು ಲೇಖಕ ಶ್ರೀನಿವಾಸ್ ಸಿರ್ನೂರಕರ್ ಹೇಳಿದರು.
ಇಂದು ಅವರು ಸಿಯುಕೆಯ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗವು ಆಯೋಜಿಸಿದ್ದ ಮೂರು ದಿನಗಳ ಮೈಂಡೆಕ್ಸ ಮೀಡಿಯಾ ಫೆಸ್ಟ್ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ತರಗತಿಯಲ್ಲಿ ತರಬೇತಿ ಪಡೆದ ಜನರು ಕ್ಷೇತ್ರ ಕಾರ್ಯದ ಮೂಲಕ ಪ್ರಾಯೋಗಿಕ ಜ್ಞಾನ ಮತ್ತು ತರಬೇತಿ ಪಡೆದ ಜನರಷ್ಟು ಯಶಸ್ವಿ ಮತ್ತು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದನ್ನು ನಾನು ನೋಡಿದ್ದೇನೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ತರಬೇತಿ ನೀಡಲು ಪತ್ರಕರ್ತರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಕೈಗಾರಿಕೋದ್ಯಮಿಗಳನ್ನು ಕ್ಯಾಂಪಸ್‍ಗೆ ಆಹ್ವಾನಿಸಿ ಪತ್ರಿಕಾಗೋಷ್ಠಿ ಮತ್ತು ಸಂವಾದವನ್ನು ಆಯೋಜಿಸಿ. ವಿದ್ಯಾರ್ಥಿಗಳು ಅದರ ಬಗ್ಗೆ ಬರೆಯಲಿ ಮತ್ತು ಪರಸ್ಪರ ಕಲಿಯಲಿ. ಭಾರತ ಅಭಿವೃದ್ಧಿ ಹೊಂದಬೇಕಾದರೆ ಗ್ರಾಮೀಣ, ಮಹಿಳೆಯರು, ಮಕ್ಕಳು, ಅಪೌಷ್ಟಿಕತೆ, ಬಡತನ, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ರಿಕೋದ್ಯಮ ಮುಖ್ಯವಾಹಿನಿಗೆ ತರಬೇಕು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ತರಬೇತಿ ನೀಡಲು ಸಹಾಯ ಮಾಡುತ್ತವೆ” ಎಂದು ಹೇಳಿದರು.
ಸನ್ಮಾನ್ಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಪದವಿಯೇ ನಿಜವಾದ ಅರ್ಹತೆ ಅಲ್ಲ, ಪತ್ರಕರ್ತರಿಗೆ ಸಮಾಜವನ್ನು ಅಧ್ಯಯನ ಮಾಡುವುದು ಬಹಳ ಮುಖ್ಯ. ಸಮಾಜವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳು ಹಳ್ಳಿಗಳು, ಸಮುದಾಯಗಳು ಮತ್ತು ಕೈಗಾರಿಕೆಗಳಿಗೆ ಹೋಗಬೇಕು. ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮಗಳು ಹೇಗೆ ಪಾತ್ರವಹಿಸಿವೆ ಎಂಬುದನ್ನು ನಾವು ನೋಡಿದ್ದೇವೆ. ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ಸತ್ಯ ಮತ್ತು ಪ್ರಾಮಾಣಿಕ ಪತ್ರಕರ್ತರು ತಪ್ಪನ್ನು ಬಹಿರಂಗಪಡಿಸಿದ್ದಕ್ಕಾಗಿ ಸಮಾಜದಿಂದ ಬೆದರಿಕೆಯನ್ನು ಎದುರಿಸಬೇಕಾಗುತ್ತಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಅಧ್ಯಯನ ನಿಕಾಯದ ಡೀನ್ ಪೆÇ್ರ.ಚನ್ನವೀರ ಆರ್.ಎಂ ಅವರು ಮಾತನಾಡಿ, “ಅತ್ಯಾಧುನಿಕ ಮಾಧ್ಯಮ ಸ್ಟುಡಿಯೋ ಮತ್ತು ವಿದ್ಯಾರ್ಥಿಗಳ ಛಾಯಾಚಿತ್ರಗಳ ಪ್ರದರ್ಶನವನ್ನು ನಾವು ಉದ್ಘಾಟಿಸಿರುವುದರಿಂದ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ವಿಭಾಗಗಳ ಸಾಧನೆಗಳ ಕುರಿತು ವರದಿಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಬೇಕು ಮತ್ತು ಅವುಗಳನ್ನು ದಾಖಲಿಸಬೇಕು. ಇದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕಲಿಯುವ ಅವಕಾಶ ನೀಡುತ್ತದೆ” ಎಂದು ಹೇಳಿದರು.
ಇದಕ್ಕೂ ಮುನ್ನ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ.ಓಯಿನಂ ಬೆಡಜಿತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ “ವಿ‍ಧ್ಯಾರ್ಥಿಗಳ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಮೈಂಡೆಕ್ಸ ಮೀಡಿಯಾ ಫೆಸ್ಟ್ 2024 ಆಯೋಜಿಸಲಾಗಿದೆ. ಮೂರು ದಿನಗಳ ಉತ್ಸವದ ಉದ್ದಕ್ಕೂ ವಿ‍ಧ್ಯಾರ್ಥಿಗಳು ಒಬ್ಬರಿಗೊಬ್ಬರು ಭೇಟಿಯಾಗಲು, ಸಹಯೋಗಿಸಲು ಮತ್ತು ಚಿಂತನ-ಪ್ರಚೋದಕ ಚರ್ಚೆಗಳು ಮತ್ತು ಸಾಂಸ್ಕøತಿಕ ಸಂಯೋಜನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಶರಣಬಸವ ವಿಶ್ವವಿದ್ಯಾಲಯದ ಮಾಧ್ಯಮ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉದ್ಯಮದ ತಜ್ಞರು ಕೃತಕ ಬುದ್ದಿಮತ್ತೆ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಮಾಧ್ಯಮದ ಕುರಿತು ಮಾತನಾಡುತ್ತಾರೆ. ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಭಾಗದ ಅಧ್ಯಾಪಕರಾದ ಡಾ.ದೀಪ್ತಿ, ಡಾ.ಕಾರ್ತೀಕ್, ಡಾ.ರೂಪಾರಾಣಿ ಸೋನವಾಲ್, ಸಿಯುಕೆ, ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ರೋಸಾಲಿ ಘೋμï ನಿರೂಪಿಸಿದರು, ಶಾಲಿನಿ ಜಾಹ್ಸನ್ ವಂದಿಸಿದರು. ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ಅಮಿμÁ ಪಟೇಲ್, ಹರ್ಷಿತಾ ಮತ್ತು ಜೋಶಿ ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಿದರು.