ಪತ್ರಿಕೆ ಹಂಚುವವರಿಗೆ ದಿನಸಿ ಕಿಟ್ ವಿತರಣೆ

ಹರಿಹರ.ಜೂ.೧೧: ಪತ್ರಿಕೆ ವಿತರಣೆ ಮಾಡುವ ಕೆಲಸದ ಬಗ್ಗೆ ತಾತ್ಸರ ಬೇಡ, ಈ ದೇಶದಲ್ಲಿ ಇದೇ ಕೆಲಸವನ್ನು ಮಾಡಿ ಉನ್ನತ ಮಟ್ಟಕ್ಕೆ ಬೆಳೆದಿರುವ ಅನೇಕ ಸಾಧಕರಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅಭಿಪ್ರಾಯಪಟ್ಟರು.ನಗರದ ರಚನಾ ಕ್ರೀಡಾ ಸಭಾಗಂಣದಲ್ಲಿ ಹನಗವಾಡಿ ವೀರೇಶ್ ಅಭಿಮಾನಿ ಬಳಗದಿಂದ  ಹಮ್ಮಿಕೊಂಡಿದ್ದ ದಿನಪತ್ರಿಕೆ ಹಂಚುವ ಹುಡುಗರಿಗೆ ದಿನಸಿ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.ಮಹಾತ್ಮಗಾಂಧಿ, ಅಬ್ದುಲ್ ಕಲಾಂ ಸೇರಿದಂತೆ ಇನ್ನೂ ಅನೇಕರು ಚಿಕ್ಕ ವಯಸ್ಸಿನಲ್ಲಿ ಪ್ರತಿದಿನ ಬೆಳಗ್ಗೆ ಪತ್ರಿಕೆ ಹಂಚಿ ಬಡತನದಲ್ಲಿ ಬೆಳೆದು, ಕಷ್ಟಪಟ್ಟು ಓದಿ ಈ ದೇಶದ ಉನ್ನತ ಸ್ಥಾನವನ್ನು ಅಲಂಕರಿಸಿರುವ ಉದಾಹರಣೆಗಳಿವೆ ಆದಕಾರಣ ತಾವುಗಳು ಈ ಕೆಲಸದ ಬಗ್ಗೆ ತಾತ್ಸರ ಹೊಂದಬಾರದು ಎಂದು ಕಿವಿ ಮಾತು ಹೇಳಿದರು.ವಿದ್ಯೆ ಎಂಬುವುದನ್ನು ಯಾರೂ ಸಹ ಕಸಿದು ಕೊಳ್ಳುವ ಆಸ್ತಿಯಲ್ಲ, ಹಾಗಾಗಿ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಲಾಕ್‌ಡೌನ್ ನಿಂದ ಪತ್ರಿಕೆ ವಿತರಕ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದ್ದು, ಇಂಹತ ವಿಷಮ ಪರಿಸ್ಥಿತಿಯಲ್ಲಿಯೂ ತಾವುಗಳು ಪ್ರತಿ ದಿನ ಜೀವದ ಹಂಗು ತೊರೆದು ಪತ್ರಿಕೆಯನ್ನು ಹಂಚುತ್ತಿರುವುದು ಶ್ಲಾಘನಿಯ ಕಾರ್ಯವಾಗಿದೆ ಎಂದರು.ಸ್ಥಿತಿವಂತರು ಕೋವಿಡ್ ಸೇನಾನಿಗಳಾಗಿ ಕೆಲಸ ಮಾಡುತ್ತಿರುವ ಪತ್ರಿಕಾ ವಿತರಕರಿಗೆ ಸಹಾಯ ಹಸ್ತ ಮಾಡಿದರೆ ಕಷ್ಟದಲ್ಲಿ ಇದ್ದವರಿಗೆ ಗುರುತಿಸಿದಂತಾಗುತ್ತದೆ ಎಂದರು.ನಗರಸಭಾ ಸದಸ್ಯ ರಜನಿಕಾಂತ್ ಮಾತನಾಡಿ, ಒಂದು ದಿನವು ವಿಶ್ರಾಂತಿ ಪಡೆಯದೆ ಪ್ರತಿದಿನ ಪತ್ರಿಕೆಯನ್ನು ಹಂಚುವ ನಿಮ್ಮ ಕಾರ್ಯ ಮೆಚ್ಚುವಂತಹದ್ದು. ಈ ಕೆಲಸದೊಂದಿಗೆ ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಿ, ದೃಶ್ಯ ಮಾಧ್ಯಮಗಳು ಕೇವಲ ಬ್ರೇಕಿಂಗ್ ಸುದ್ದಿ ನೀಡಿದರೆ ಪತ್ರಿಕೆಗಳು ವಿಸ್ತಾರವಾದ ವಿಷಯವನ್ನು ತಿಳಿಸುತ್ತವೆ. ಹಾಗಾಗಿ ಅನೇಕರು ಬೆಳಗ್ಗೆ ಪತ್ರಿಕೆ ಬರುವುದನ್ನೇ ಕಾಯುತ್ತಿರುತ್ತಾರೆ ಎಂದರು.ಪತ್ರಕರ್ತ ಶೇಖರಗೌಡ ಪಾಟೀಲ್ ಮಾತನಾಡಿ, ಸೋಂಕಿನಿಂದ ರಕ್ಷಿಸಿಕೊಳ್ಳಲು ಸರ್ಕಾರ ಸಾರ್ವಜನಿಕರಿಗೆ ಮನೆಗಳಲ್ಲಿಯೇ ಇರುವಂತೆ ಸೂಚನೆ ಮಾಡಿದೆ. ಇಂತಹ ಸಂಕಷ್ಟದ ದಿನಗಳಲ್ಲೂ ತಮ್ಮ ಜೀವದ ಹಂಗು ತೊರೆದು ಮನೆಗಳಿಗೆ ತೆರಳಿ ಪ್ರತಿಕೆಗಳನ್ನು ತಲುಪಿಸುತ್ತಿದ್ದಾರೆ.‘ಕೊರೊನಾ ವಾರಿಯರ್ಸ್ ರೀತಿ ವಿತರಕರು ಕೆಲಸ ಮಾಡುತ್ತಿದ್ದಾರೆ. ಆದರೆ ಇತರೆ ವಾರಿಯರ್ಸ್ಗಳಿಗೆ ಗೌರವದ ಜೊತೆಗೆ ಆಹಾರ ಪೊಟ್ಟಣ ಸೇರಿದಂತೆ ಧನ ಸಹಾಯವು ನೀಡಲಾಗುತ್ತಿದೆ. ಇಲ್ಲಿಯವರೆಗೆ ನಮ್ಮ ಪ್ರತಿಕಾ ವಿತರಿಕರಿಗೆ ಸರ್ಕಾರ ನೆರವಿಗೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕರು ವಿತರಕರನ್ನು ಗುರುತಿಸಿ ಸಹಾಯ ಮಾಡಿರುವುದು ಒಳ್ಳೆಯ ಕಾರ್ಯ ಎಂದು ಅಭಿನಂದಿಸಿದರು.  ಈ ಸಮಯದಲ್ಲಿ ನಗರಸಭಾ ಸದಸ್ಯರಾದ ಅಶ್ವಿನಿ.ಕೆ, ಸುರೇಶ್ ತೆರದಾಳ್, ಎಚ್.ಎಸ್. ರಾಘವೇಂದ್ರ, ಬಿಜೆಪಿ ನಗರಾಧ್ಯಕ್ಷ ಅಜಿತ್ ಸಾವಂತ್, ಮುಖಂಡರಾದ ಪ್ರವೀಣ್ ಜಿ. ಪವಾರ್, ತುಳಜಪ್ಪ ಭೂತೆ, ಆನಂದ್ ಕುಮಾರ್, ರಾಜೇಶ್ ವರ್ಣೆಕರ್, ಪತ್ರಕರ್ತರಾದ ಹೆಚ್.ಸಿ. ಕೀರ್ತಿಕುಮಾರ್, ಬಿ.ಎಮ್. ಚಂದ್ರಶೇಖರ್, ಚಿದಾನಂದ ಕೆ, ವಿತರಕರಾದ ಹನುಮಂತಪ್ಪ, ಚೇತನ್ ಗೌಡ, ಶಿವಕುಮಾರ್, ಶಂಭುಲಿಂಗ ಹೆಚ್ ಇತರರಿದ್ದರು.