
ಸಂಜೆವಾಣಿ ವಾರ್ತೆ
ಕುಕನೂರು, ಮೇ.09: ದಿನನಿತ್ಯ ಮಳೆ ಚಳಿ ಎನ್ನದೆ ದಿನಪತ್ರಿಕೆ ವಿತರಿಸುವ ವಿತರಕ ಬುಡ್ಡಸಾಬ್ ಬೆದವಟ್ಟಿ ಕುಕನೂರ ಅವರು ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿರುವ ಇವರು 2023ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 70% ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ೪ ವರುಷ ಗಳಿಂದ ಪತ್ರಿಕೆ ವಿತರಿಸುವ ಕಾಯಕ ಮಾಡುತ್ತಾ ಕಠಿಣ ಪರಿಶ್ರಮದಿಂದ ಓದಿ ಉತ್ತಮ ಅಂಕ ಪಡೆದಿದ್ದಾರೆ.