ಪತ್ರಿಕೆ ವರದಿ ಫಲಶೃತಿ: ಪ್ರಮೀಳಾದೇವಿ ವರ್ಗಾವಣೆ- ಜನರಲ್ಲಿ ಖುಷಿ

ಸಿಂಧನೂರು,ಏ.೧೩- ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಹಾಗೂ ತಾಯಿ ಕಾರ್ಡ್‌ಗೆ ಮಹಿಳೆಯರಿಂದ ಲಂಚ ಪಡೆಯುತ್ತಿದ್ದ ಉಮಲೂಟಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಣ್ಣು ತೆರೆಸಲಾಗಿತ್ತು.
ಸಂಜೆವಾಣಿ ವರದಿಗೆ ಡಿಹೆಚ್‌ಓ ಡಾ.ಸುರೇಂದ್ರ ಬಾಬು ಸ್ಪಂದಿಸಿ ಕೂಡಲೆ ನರ್ಸ್‌ಗೆ ನೋಟಿಸ್ ನೀಡಿ ತನಿಖೆ ನಡೆಸಿ ವರದಿ ನೀಡುವಂತೆ ತುರ್ವಿಹಾಳ ಆಸ್ಪತ್ರೆಯ ಮುಖ್ಯ ವೈದಾದಿಕಾರಿ ಡಾ.ರಮೇಶಗೆ ಸೂಚನೆ ನೀಡಿದ್ದರು.
ಡಿಹೆಚ್‌ಓ ಸೂಚನೆ ಮೇರೆಗೆ ಡಾ. ರಮೇಶ ಪತ್ರಿಕೆಯ ವರದಿ ಆಧರಿಸಿ ನರ್ಸ್ ಮೇಲೆ ಕ್ರಮ ಕೈಗೊಂಡು ಡಿಹೆಚ್‌ಓ ಗೆ ವರದಿ ನೀಡಿದ ಮೇಲೆ ಪತ್ರಿಕೆಯ ವರದಿ ಆಧಾರದ ಮೇಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಉಮಲೂಟಿ ಗ್ರಾಮದ ಆರೋಗ್ಯ ಉಪಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯನ್ನು ಉಮಲೂಟಿ ಗ್ರಾಮದಿಂದ ರಾಯಚೂರಿಗೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ.
ಉಮಲೂಟಿ ಉಪ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾದ ಪ್ರಮೀಳಾದೇವಿ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ವರ್ಗಾವಣೆ ಮಾಡಿದ ಬಗ್ಗೆ ಗ್ರಾಮಸ್ಥರು ಮೆಚ್ಚಿಗೆ ವ್ಯಕ್ತಪಡಿಸಿ ಗ್ರಾಮದಲ್ಲಿ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿ ಪತ್ರಿಯಲ್ಲಿ ವರದಿ ಪ್ರಕಟಿಸಿದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಉಮಲೂಟಿ ಗ್ರಾಮದ ನರ್ಸ ಜಯಲಕ್ಷ್ಮೀ ಸಹ ಸರಿಯಾಗಿ ಕರ್ತವ್ಯ ಮಾಡದೆ ರೋಗಿಗಳನ್ನು ನಿರ್ಲಕ್ಷ್ಯ ಮಾಡುವ ಮೂಲಕ ಅವರಿಂದ ಹಣ ಪಡೆದು ಚಿಕಿತ್ಸೆಯನ್ನು ನೀಡುತ್ತಾಳೆಂಬ ಸಾರ್ವಜನಿಕರ ಆರೋಪ ಇದ್ದು ಇದರ ಬಗ್ಗೆ ಡಾ. ರಮೇಶ ನಿರ್ಲಕ್ಷ್ಯ ಮಾಡದೆ ನಿಗಾ ವಹಿಸಬೇಕು ಇಲ್ಲದಿದ್ದರೆ ಯಾರಿಗಾದರೂ ಹೆಚ್ಚು ಕಮ್ಮಿ ಯಾದರೆ ಅದರ ಹೊಣೆ ನಿಮ್ಮ ಮೇಲೆ ಬರುತ್ತದೆ ಎನ್ನುವದನ್ನು ಮೇರೆಯಬಾರದು ಎಂಬುದು ಸಾರ್ವಜನಿಕರ ಪಶ್ನೆಯಾಗಿದೆ.
ಬಾಕ್ಸ್
ಅಮಾನತ್ತುಗೊಳಿಸಿ
ಉಮಲೂಟಿ ಉಪ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾದ ಪ್ರಮೀಳಾದೇವಿ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ವರ್ಗಾವಣೆ ಮಾಡಿದ್ದಾರೆ. ಇವರನ್ನು ಕೆಲಸದಿಂದ ಅಮಾನತ್ತು ಮಾಡಬೇಕು ಆಗ ಮಾತ್ರ ನೊಂದ ಜನರಿಗೆ ನ್ಯಾಯ ಸಿಕ್ಕಂತಾಗುತ್ತದೆ ಹಾಗೂ ಉಮಲೂಟಿ ಗ್ರಾಮದ ನರ್ಸ್ ಜಯಲಕ್ಷ್ಮೀ ಸಹ ಸರಿಯಾಗಿ ಕರ್ತವ್ಯ ಮಾಡದೆ ರೋಗಿಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇವರ ವಿರುದ್ದ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ಸುರೇಂದ್ರ ಬಾಬು ಸರಿಯಾದ ಕ್ರಮ ತೆಗೆದುಕೊಂಡು ಇವರನ್ನು ಅಮಾನತ್ತು ಮಾಡಬೇಕೆಂದು ಜನರ ಒತ್ತಾಯವಾಗಿದೆ.