
ಸಂಜೆವಾಣಿ ನ್ಯೂಸ್
ಮೈಸೂರು: ಆ.28:- ಪತ್ರಿಕೆಯು ಜನರ ಹಿತ ಕಾಯುವ ಸಲಹೆಗಾರನಾಗಿ, ರಾಷ್ಟ್ರ ಸಂರಕ್ಷಕನಾಗಿ ಕೆಲಸ ಮಾಡಬೇಕೆ ಹೊರತು ಹೊಗಳು ಭಟ್ಟರಂತೆ ವರ್ತಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದ ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮವು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಈ ನಾಡಿನಲ್ಲಿ ಬುದ್ಧ ಹುಟ್ಟಿದ್ದಾನೆ. ಬುದ್ಧನ ಕಾಲದಲ್ಲಿಯೇ ಪ್ರಜಾಪ್ರಭುತ್ವ ಇತ್ತು. ಬೆಳಕು ಇಲ್ಲದವರಿಗೆ, ಅಸ್ಪೃಶ್ಯರಿಗೆ ಬೆಳಕು ತೋರಿಸುವ, ಸಮಾನ ಅವಕಾಶ ಕಲ್ಪಿಸಿದ್ದರು. ಪ್ರಜಾಪ್ರಭುತ್ವದ ಮುಖ್ಯ ಗುಣವೂ ಅದೇ ಆಗಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ಕಾರ್ಯ ಮಹತ್ವವಾದದ್ದು. ಜನರ ಹಿತ ಕಾಯುವ ಸಲಹೆಗಾರನಾಗಿ, ರಾಷ್ಟ್ರ ಸಂರP?ಷÀಕನಾಗಿ ಪತ್ರಿಕೆಗಳು ಕೆಲಸ ಮಾಡಬೇಕು. ಅಂಬೇಡ್ಕರ್, ಗಾಂಧಿಜಿ ಪತ್ರಿಕೆಗಳನ್ನು ಆರಂಭಿಸಿದ್ದರು. ಗಾಂಧೀಜಿ ಯಂಗ್ ಇಂಡಿಯ, ಹರಿಜನ ಪತ್ರಿಕೆ ಆರಂಭಿಸಿದರು. ಮೂಖನಾಯಕ, ಬಹಿಷ್ಕೃತ ಭಾರತ ಪತ್ರಿಕೆ ಮಾಡಿದರು. ತಿಲಕರು ಕೆಂಪು ಪತ್ರಿಕೆ ಆರಂಭಿಸಿದರು. ತಿಲಕರು ನೂರಾರು ವರ್ಷಗಳ ಕಾಲ ಪತ್ರಿಕೆಯನ್ನು ಮುನ್ನಡೆಸಿದ್ದಾಗಿ ಅವರು ಹೇಳಿದರು.
ವಿಶ್ವದ ಪತ್ರಿಕೆಗಳ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪೈಕಿ ಭಾರತ 161ನೇ ಸ್ಥಾನದಲ್ಲಿದೆ. ಕೈಗಾರಿಕೋದ್ಯಮಿಗಳ ಪರವಾಗಿ ಮಾಧ್ಯಮ ನಿಂತರೆ ದೇಶ ಅದೋಗತಿಗೆ ಹೋಗುತ್ತದೆ. ಬಡವರ ಪರವಾಗಿ ಬರೆದರೆ ಪತ್ರಿಕೆ ಪ್ರತಿಷ್ಠೆ ಹೆಚ್ಚುತ್ತದೆ. ಹೊಗಳು ಭಟ್ಟತನ ಪತ್ರಿಕೆಗಳ ಕೆಲಸ ಅಲ್ಲ. ಸಮ ಸಮಾಜದ ಕೆಲಸ ಮಾಡಬೇಕು. ಪತ್ರಿಕೆಗಳು ವಾಕ್ ಸ್ವಾತಂತ್ರ?ಯ ಇರಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ಪರವಾಗಿ ನಿಲ್ಲಲು ಸಾಧ್ಯವಿಲ್ಲ. ಆದ್ದರಿಂದ ಪತ್ರಿಕಾ ರಂಗದ ಜವಾಬ್ದಾರಿ ದೊಡ್ಡದಿದೆ ಎಂದು ಅವರು ಹೇಳಿದರು.
ಪತ್ರಿಕೆಗಳು ಎಚ್ಚರಿಕೆಯ ಗಂಟೆ ಕಟ್ಟದಿದ್ದರೆ ಭಾರತ ಸ್ವತಂತ್ರವಾಗಿ ಇರಲಾರದು. ಬುದ್ಧನ ಮಾನವೀಯ ಸಂದೇಶ ಸಾರುವ ಜವಾಬ್ದಾರಿ ನಿಮ್ಮ ಮೇಲಿದೆ. ಕತ್ತಲಿನಲ್ಲಿ ಇರುವವರನ್ನು ಬೆಳಕಿನ ಕಡೆಗೆ ಕರೆದೊಯ್ಯುವ ಕೆಲಸ ಆಗಬೇಕು. ದಪ್ಪ ಚರ್ಮದವರ ಜವಾಬ್ದಾರಿಯನ್ನು ಹೆಚ್ಚಿಸುವ ಕೆಲಸ ನೀವು ಮಾಡಬೇಕು. ಇನ್ನು ಮನೆ ನೀಡಬೇಕು, ಬಸ್ ಪಾಸ್ ಬೇಕು, ಸಂಘಕ್ಕೆ ನಿವೇಶನ ಮಂಜೂರು ಮಾಡಿಸಬೇಕು ಎಂಬುದು ಪತ್ರಕರ್ತರ ಸಾಮಾನ್ಯ ಬೇಡಿಕೆ. ನಿಮ್ಮ ವೃತ್ತಿ ಜೀವನದ ಅವಧಿಯಲ್ಲಿ ಒಂದು ಮನೆ ಕಟ್ಟಿದರೆ ನಿಮಗೂ ಸುರಕ್ಷಿತ ಭಾವನೆ ಇರುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ಸಂಘದ ಅಧ್ಯP?ಷÀ ಎಸ್.ಟಿ. ರವಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಪತ್ರಕರ್ತರಿಗೆ ಗುಂಪು ಮನೆ ಯೋಜನೆಯಡಿ 250 ಮನೆಗಳನ್ನು ರಿಯಾಯಿತಿ ದರದಲ್ಲಿ ನೀಡಿದರೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿರುವಂತೆ ಪತ್ರಕರ್ತರಿಗೂ ಉಚಿತ ಬಸ್ ಸೇವೆ ಒದಗಿಸಬೇಕು. ಈ ಸಂಬಂಧ ಈ ಬಾರಿಯ ಸಂಪುಟ ಸಭೆಯಲ್ಲಿಯೇ ತೀರ್ಮಾನ ಕೈಗೊಳ್ಳುವಂತೆ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಿಎಸ್‍ಎಸ್ ಫೌಂಡೇಷನ್ ಅಧ್ಯP?ಷÀ ಶ್ರೀಹರಿ ದ್ವಾರಕಾನಾಥ್, ಮೇಯರ್ ಶಿವಕುಮಾರ್, ಸಂಘದ ಉಪಾಧ್ಯP?ಷÀ ಅನುರಾಗ್ ಬಸವರಾಜ್, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ನಗರ ಕಾರ್ಯದರ್ಶಿ ರಂಗಸ್ವಾಮಿ, ಗ್ರಾಮಾಂತರ ಕಾರ್ಯದರ್ಶಿ ಮಹದೇವ್, ಖಜಾಂಚಿ ನಾಗೇಶ್ ಪಾಣತ್ತಲೆ, ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಮೊದಲಾದವರು ಇದ್ದರು.