ಪತ್ರಿಕೆಗಳ ಪಾತ್ರ ಮಹತ್ವದ್ದು

ಕೋಲಾರ.ಏ.೨೮, – ಸಮಾಜಕ್ಕೆ ಮಹತ್ವದ ವಿಷಯಗಳನ್ನು ಮುಟ್ಟಿಸುವಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯ ಎಂದು ಡಾ. ಶರಣಪ್ಪ ಗಬ್ಬೂರ್ ಅಭಿಪ್ರಾಯಪಟ್ಟರು.
ಕೋಲಾರ ನಗರದ ಗಲ್‌ಪೇಟೆಯಲ್ಲಿ ಮಾನವ ಅಭಿವೃದ್ಧಿ ಯೋಗ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಆರಾಧನಾ ಮಹೋತ್ಸವದಲ್ಲಿ ಸನ್ಮಾನಿಸಿ ಮಾತಾನಾಡಿದರು.
ಪತ್ರಿಕೆಗಳನ್ನು ಪ್ರತಿಯೊಂದು ಮನೆಮನೆಗೆ ತಲುಪಿಸುವ ಕಾರ್ಯ ವಿತರಕರದ್ದು. ಅವರ ಪಾತ್ರ ಪ್ರಮುಖವಾಗಿರುತ್ತದೆ. ಆ ನಿಟ್ಟಿನಲ್ಲಿ ಬಹಳಷ್ಟು ಕಾಣದ ವಿತರಕರು ಹಗಲಿರುಳು ರಾತ್ರಿಯೆಲ್ಲಾ ಕೆಲಸ ಮಾಡಿ ಸರಿಯಾದ ಸಮಯಕ್ಕೆ ಜನರಿಗೆ ತಲುಪುವ ಅವರ ಸಾಧನೆಗೆ ಗೌರವ ಸಿಗಲೇಬೇಕು. ಆಗ ಮಾತ್ರ ಅವರಿಗೆ ನೆಮ್ಮದಿ ಸಂತೋಷ ಮತ್ತು ತೃಪ್ತಿ ಸಿಗುತ್ತದೆ ಎಂದರು.
ಮಾನವ ಅಭಿವೃದ್ಧಿ ಯೋಗ ಟ್ರಸ್ಟ್ ಅಧ್ಯಕ್ಷ ಡಾ. ಪೋಸ್ಟ್ ನಾರಾಯಣಸ್ವಾಮಿ ಮಾತಾನಾಡಿ ಆರಾಧನಾ ಎನ್ನುವುದು ಭಾರತೀಯ ಸಂಪ್ರದಾಯದಲ್ಲಿ ಅದರಲ್ಲೂ ಪ್ರತಿಯೊಬ್ಬ ವ್ಯಕ್ತಿಯ ರಕ್ತದಲ್ಲಿ ಅದು ಒಡಗೂಡಿ ಬಂದಿರುವಂತದ್ದು ನಮಗೆ ತಿಳಿದಿರುವ ಸಂಗತಿ. ಹಾಗಾಗಿ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಯುಕೋ ಬ್ಯಾಂಕಿನ ಬಾಲಾಜಿ ಸರಸ್ವತಮ್ಮ, ಶಾರದಾ ವೆಂಕಟರಮಣ, ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು.