ಪತ್ರಿಕೆಗಳು ಸಮಾಜದ ಧ್ವನಿ: ಧೂಪದ್

(ಸಂಜೆವಾಣಿ ನ್ಯೂಸ್)
ಕಲಘಟಗಿ, ಜು2: ಸಮಾಜದಲ್ಲಿನ ಸಮಸ್ಯೆಗಳಿಗೆ ಪತ್ರಿಕೆಗಳು ಧ್ವನಿಯಾಗಿ ಕೆಲಸ ಮಾಡುತ್ತಿವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಧೂಪದ ಹೇಳಿದರು.
ಪಟ್ಟಣದಲ್ಲಿ ಕಲಘಟಗಿ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾಗಿ ಹೊರಹೊಮ್ಮಿದ ಮಂಗಳೂರು ಸಮಾಚಾರದ ಮೊದಲ ಸಂಚಿಕೆ ಬಿಡುಗಡೆಗೊಂಡ ದಿನದ ಸ್ಮರಣಾರ್ಥ ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನ ಆಚರಿಸಲಾಗುತ್ತಿದೆ. ದೇಶದ ಸ್ವಾತಂತ್ರ್ಯ ಹಾಗೂ ರಾಜ್ಯ ಏಕೀಕರಣ ಸಂದರ್ಭದಲ್ಲಿ ಪತ್ರಿಕೆಗಳು ಸಾಕಷ್ಟು ಜನಪರ ಕಾರ್ಯ ನಿರ್ವಹಿಸಿವೆ ಎಂದರು.
ಪತ್ರಿಕೆಗಳು ಇಂದೂ ಸಹ ಅನೇಕ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿವೆ. ಪತ್ರಿಕಾ ದಿನಾಚರಣೆಯ ದಿನದಲ್ಲಾದರೂ ಇವುಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕು. ಸರ್ಕಾರದ, ರಾಜಕೀಯ ನಾಯಕರು, ಪ್ರಭಾವಿಗಳ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಮಾಧ್ಯಮಗಳು, ಪತ್ರಿಕೆ ಕಾರ್ಯನಿರ್ವಹಿಸುವಂತಾಗಬೇಕು ಎಂದರು.
ಉಪಾಧ್ಯಕ್ಷ ಶಶಿಧರ ಕಟ್ಟಿಮನಿ, ಕಾರ್ಯದರ್ಶಿ ಪ್ರಭು ರಂಗಾಪುರ, ಗೌರವ ಅಧ್ಯಕ್ಷ ರವಿ ಬಡಿಗೇರ, ಖಜಾಂಜಿ ಪ್ರಕಾಶ ಲಮಾಣಿ, ಸದಸ್ಯರಾದ ಉಮೇಶ ಜೋಶಿ, ಪ್ರಹ್ಲಾದಗೌಡ ಗೊಲ್ಲಗೌಡರ, ರಮೇಶ ಸೋಲಾರಗೊಪ್ಪ, ಕಲ್ಲಪ್ಪ ಮಿರ್ಜಿ, ವೀರೇಶ ಹಾರೋಗೇರಿ, ಮಂಜುನಾಥ ಮಾಳಗಿ, ವಿನಾಯಕ ಭಟ, ರಾಕೇಶ ಅಳಗವಾಡಿ, ಉದಯ ಗೌಡರ, ಸುಭಾಷ ಸುಣಗಾರ ಮಾತನಾಡಿದರು.
ಮುಖಂಡರಾದ ಮಹೇಶ ಅಲಗೂರು, ಅಜ್ಮತ್ ಜಾಗೀರದಾರ, ಡಾ. ಮಂಜುನಾಥ ಮೂಗನ್ನವರ, ಡಾ. ಪ್ರಕಾಶ ಅಂಗಡಿ, ಡಾ. ಸುರೇಶ ಕಳಸನ್ನವರ, ರಫೀಕ್ ಸುಂಕದ ಇತರರು ಸೇರಿದಂತೆ ಇತರರು ಕೊಡ ಮಾಡಿದ ರೇನ್ ಕೋಟ್ ಗಳನ್ನು ಪತ್ರಿಕಾ ವಿತರರಿಗೆ ವಿತರಿಸಲಾಯಿತು.
ಪತ್ರಿಕಾ ವಿತರಕರಾದ ಈರಣ್ಣ ಅಂಗಡಿ, ರಘುವೀರ ಮೊರದ, ಅರುಣ ಅಂಗಡಿ, ಗುರಪ್ಪ ಸೋಮನಕೊಪ್ಪ, ಹೇಮಂತ ಗೋದಂಕರ, ಪ್ರಶಾಂತ ಬೆಂಡಿಗೇರಿ, ಅನಿಲ ದೊಡ್ಡಮನಿ, ಪ್ರವೀಣ ರುದ್ರಾಕ್ಷಿ, ಗುರು ದೊಡ್ಡಮನಿ, ರವಿ ಹಿಪ್ಪಿಯವರ, ಗುರಪ್ಪ ಸೋಮನಕೊಪ್ಪ, ಯೋಗೇಶ ಹಿಪ್ಪಿಯವರ ಇದ್ದರು.