ಪತ್ರಿಕೆಗಳು ಜ್ಞಾನದ ದೀಪಗಳಾಗಿ ಕೆಲಸ ಮಾಡುತ್ತಿವೆ

ನರಗುಂದ, ಜು14:ಪತ್ರಿಕೆಗಳು ಮನುಷ್ಯನಿಗೆ ಜ್ಞಾನದ ದೀಪಗಳಾಗಿ ಕೆಲಸ ಮಾಡುತ್ತಿವೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ನುಡಿದರು.
336ನೇ ಮಾಸಿಕ ಶಿವಾನುಭವದ ಅಂಗವಾಗಿ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತ ಮಠದಲ್ಲಿ ಪತ್ರಿಕಾ ದಿನಾಚರಣೆಯ ಸಾನಿಧ್ಯವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀಗಳಾದ ವಿರುಪಾಕ್ಷಿ ದೇವರು ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ದೊರೆಸ್ವಾಮಿ ವೀರಕ್ತ ಮಠದಿಂದ ಶಾಂತಲಿಂಗ ಶ್ರೀಗಳು ತಾಲ್ಲೂಕಿನ ಯಲ್ಲ ಪಾತೆಕರ್ತರನ್ನು ಸತ್ಕಾರಿಸಿದರು.
ಹಿರಿಯ ಪತ್ರಕರ್ತರಾದ ಸಿ.ಬಿ. ಸುಬೆದಾರ ಉಮೇಶ ಬೋಳಶೆಟ್ಟಿ ಝೆಡ್ ಎಮ್ ಖಾಝಿ ಶಂಕ್ರಪ್ಪ ತೆಗ್ಗಿನಮನಿ ಬಸವರಾಜ ಹಲಕುರ್ಕಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ನಿಡಗುಂದಿ ಯಲ್ಲ ಪತ್ರಕರ್ತರಿಗೆ ಕಾಣಿಕೆಯಾಗಿ ಪೆನ್ ನೀಡಿದರು.
ಪ್ರಾರಂಭದಲ್ಲಿ ಕುಮಾರಿ ದಾನೇಶ್ವರಿ ಪೂಜಾರ ಸ್ವಾಗತಗೀತೆ ಹಾಡಿದರು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಮೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ವೇದಿಕೆಯ ಮೇಲೆ ಪತ್ರಕರ್ತರಾದ ಸಿದ್ಧಾಂಲಿಂಗಯ್ಯ ಮನ್ನೂರಮಠ ಪ್ರಭು ಗುಡಾರದ ರಾಜು ಹೊಸಮನಿ ಶಂಕ್ರಪ್ಪ ತೆಗ್ಗಿನಮನಿ ಉಪಸ್ಥಿತರಿದ್ದರು. ಐನಾಪೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.