ಪತ್ರಿಕೆಗಳಲ್ಲಿ ಇನ್ನು ಸತ್ಯ ಅಡಗಿದೆ, ರಸ್ತೆ ಅಪಘಾತ ತಡೆಗೆ ಸಂಚಾರ ನಿಯಮ ಕಡ್ಡಾಯ : ಸಚಿವ ಡಾ. ಶರಣಪ್ರಕಾಶ್ ಪಾಟೀಲ್

ಸೇಡಂ, ಜು,10: ತಂತ್ರಜ್ಞಾನ ಬೆಳದಂತೆ ಸಮಾಜ ಜಾಗೃತವಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ಷಣದ ಸುದ್ದಿಗಳು, ಅದರ ಜೊತೆಗೆ ಎಲೆಕ್ಟ್ರಿಕಲ್ ಮೀಡಿಯಾ ಪ್ರಸಾರವಾಗುವ ಸತ್ಯ ಸುಳ್ಳು ಎಂಬುದು ಗೊತ್ತಾಗುವುದಿಲ್ಲ ( ಪ್ರಿಂಟ್ ಮೀಡಿಯಾ) ಆದರೆ ಇನ್ನೂ ಪತ್ರಿಕೆಗಳಲ್ಲಿ ಸತ್ಯಾಂಶದ ಸುದ್ದಿಗಳು ಪ್ರಕಟಣೆ ಮಾಡುವ ಮೂಲಕ ಶಾಸಕಾಂಗ ನ್ಯಾಯಾಂಗದ ಮುಂದೆ ಇಡುವಂತ ಪ್ರಯತ್ನ ಪತ್ರಿಕೆಗಳು ಮಾಡುತ್ತಿರುವುದು ಸಂತಸ ತಂದಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯವಾದಿಗಳ ಸಂಘದ ಸಂಭಾಂಗಣದಲ್ಲಿ ತಾಲೂಕಾ ನ್ಯಾಯವಾದಿಗಳ ಸಂಘದಿಂದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸಚಿವ ಡಾ. ಪಾಟೀಲರು ಮಾತನಾಡಿ ಮಾದರಿ ತಾಲೂಕುವನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡಬೇಕಿದೆ. ನಮ್ಮ ಸರ್ಕಾರದಿಂದ ಅಭಿವೃದ್ಧಿಗಾಗಿ ಬೇಕಾದಂತಹ ಅನುದಾನ ತರಲು ನಾನು ಸಿದ್ಧವಾಗಿದ್ದೇನೆ, ನ್ಯಾಯವಾದಿಗಳ ಬೇಡಿಕೆಗಳಿಗೆ ತಕ್ಷಣ ಈಡೇರಿಸುವುದಾಗಿ, ಹಾಗೂ ಅಪಘಾತದಿಂದ ದ್ವಿಚಕ್ರ ತ್ರಿಚಕ್ರ ವಾಹನ ಸವಾರರಿಗೆ ಕುಟುಂಬಸ್ಥರಿಗೆ ಪರಿಹಾರ ಕಲ್ಪಿಸಿಕೊಡಲು ಕಟ್ಟುನಿಟ್ಟಿನ, ವಾಹನಗಳ ಇನ್ಸೂರೆನ್ಸ್, ದಾಖಲಾತಿಗಳು ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುವುದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಚಾರ ನಿಯಮ ಪಾಲನೆ ಕಡ್ಡಾಯಗೊಳಿಸಲು ಸೂಚಿಸುವುದಾಗಿ ಹೇಳಿದರು.ಈ ಸಮಾರಂಭದಲ್ಲಿ ಗೌರವಾನ್ವಿತ ಶ್ರೀ ಕರಣ ಗುಜ್ಜರ್, 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಲಬುರಗಿ,ಪೀಠಾಸೀನ, ಸೇಡಂ
ಗೌರವಾನ್ವಿತ ಶ್ರೀ ಸಾಗರ ಗುರುಗೌಡ ಪಾಟೀಲ್ ಹಿಲಯ ಶ್ರೇಣಿ ದಿವಾಣಿ ನ್ಯಾಯಾಧೀಶರು, ಸೇಡಂಗೌರವಾನ್ವಿತ ಶ್ರೀ ಸುನೀಲ ಎಸ್. ತಳವಾರ ಪ್ರಥಮ ದರ್ಜೆ ದಿವಾಣಿ ನ್ಯಾಯಾಧೀಶರು ಹಾಗೂನ್ಯಾಯಿಕ ದಂಡಾಧಿಕಾಲಿಗಳು, ನ್ಯಾಯವಾದಿಗಳ ಸಂಘ ಅಧ್ಯಕ್ಷ ಮಲ್ಲನಗೌಡ ಎಸ್. ಬೆನಕನಹಳ್ಳಿ ಉಪಾಧ್ಯಕ್ಷ ಮಹೇಂದ್ರರೆಡ್ಡಿ ಜಿಲೇಡಪಲ್ಲಿ, ಕಾರ್ಯದರ್ಶಿ,
ಶ್ರೀ ವಸಂತಕುಮಾರ ಪೂಜಾರಿ ಸರ್ವ ನ್ಯಾಯವಾದಿಗಳ ಸಂಘದ ಸದಸ್ಯರು ಮಹಿಳಾ ವಕೀಲರು ಇದ್ದರು.