ಪತ್ರಿಕಾ ವಿತರಕರೊಡನೆ ಪ್ರೀತಿಯಿಂದ ವರ್ತಿಸಿ: ಹೇರೂರ್

ವಾಡಿ:ಜ.8: ಮಳೆ-ಗಾಳಿ ಚಳಿ-ಬಿಸಿಲು ಎನ್ನದೇ ಜಗತ್ತಿನ ಮಾಹಿತಿಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವಿತರಕರೊಡನೆ ಪ್ರೀತಿಯಿಂದÀ ವರ್ತಿಸಿ ಎಂದು ಪತ್ರಕರ್ತ ಮಡಿವಾಳಪ್ಪ ಹೇರೂರ್ ಹೇಳಿದರು.

ಪಟ್ಟಣದ ಪುರಸಭೆ ಕಛೇರಿಯಲ್ಲಿ ಅಧ್ಯಕ್ಷೆ ಝರೀನಾಬೇಗಂ ಅವರ ಸ್ವಂತ ಖರ್ಚಿನಲ್ಲಿ ಚಳಿಯಲ್ಲಿ ಪತ್ರಿಕೆ ಹಂಚುವ ಯುವಕರಿಗೆ ಸ್ವೇಟರ್ (ಬಿಸಿ ಉಡುಪು) ವಿತರಿಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಕಲಿಕಾ ಹಂತದ ಬಡ ಯುವಕರು ತಮ್ಮ ಹೊಟ್ಟೆ ಪಾಡು ತುಂಬಿಸಿಕೊಳ್ಳಲು, ಸಿಕ್ಕ ಸಮಯದ ಸದುಪಯೋಗ ಪಡೆದುಕೊಂಡು ಪತ್ರಿಕೆ ವಿತರಣೆ ಕೆಲಸಕ್ಕೆ ಮುಂದಾಗುತ್ತಾರೆ. ತನಗಿರುವ ಕಷ್ಟ ಮರೆತು ಸಂತೋಷದಿಂದ ಮನೆ ಬಾಗಿಲಿಗೆ ತಲುಪುತ್ತಾರೆ. ಆದರೆ, ಸ್ವಲ್ಪ ತಡವಾದರೂ ಬೇಜಾರು ಮಾಡಿಕೊಳ್ಳುವ ಬದಲು ಸಮಾಧಾನದಿಂದ ವರ್ತಿಸಿ ಪತ್ರಿಕೆ ಪಡೆದುಕೊಳ್ಳಿ ಎಂದು ಅವರು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷ ತಿಮ್ಮಯ್ಯಾ ಪವಾರ್, ಸದಸ್ಯ ದೇವಿಂದ್ರ ಕರದಳ್ಳಿ ಮಾತನಾಡಿದರು. ಕಾಂಗ್ರೇಸ್ ಯುವಮುಖಂಡ ಮಹಮ್ಮದ ಅಶ್ರಫಖಾನ್, ಅಕೌಟೆಂಟ್ ಕೆ.ವಿರುಪಾಕಿ,್ಷ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಮಲ್ಲಯ್ಯಾ ಗುತ್ತೇದಾರ, ಸದಸ್ಯ ತುಕಾರಾಮ ರಾಠೋಡ್, ಶರಣು ನಾಟೇಕರ್, ವಿಶಾಲ ನಂದೂರಕರ್, ಮುಖಂಡ ಶರಣಪ್ಪ ವಾಡೇಕರ್, ವಿಜಯಕುಮಾರ ಸಿಂಘೆ, ಅಬ್ರಾಹಂ ರಾಜಣ್ಣ, ಪರಶುರಾಮ ಕಟ್ಟಿ, ಸಂಘಟನಾಧಿಕಾರಿ ಕಾಶಿನಾಥ ಧನ್ನಿ ಸೇರಿದಂತೆ ಅನೇಕರು ಇದ್ದರು. ಮನೋಜ ಕಲಮನಿ, ಚಂದ್ರು ಕೊಲಿ, ಮಹಮ್ಮದ ಖಾಸಿಂ, ಅಬ್ದುಲ ಸತ್ತಾರ ಸೇರಿದಂತೆ 8 ಜನ ಪತ್ರಿಕಾ ವಿತರಕರಿಗೆ ಬೆಚ್ಚನೆಯ ಉಡುಪು ನೀಡಿ ಅಧ್ಯಕ್ಷರು ಮಾನವೀಯತೆ ಮರೆದರು.