ಪತ್ರಿಕಾ ವಿತರಕರಿಗೆ ಮಾಸ್ಕ್ ವಿತರಣೆ

ಬೀದರ:ಮೇ.26: ಜೈ ಹಿಂದ್ ಹಿರಿಯ ನಾಗರಿಕರ ಸಂಘದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ
ಪತ್ರಿಕಾ ಏಜೆಂಟರು ಹಾಗೂ ವಿತರಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಯುದ್ಧೋಪಾದಿಯಲ್ಲಿ ಕೋವಿಡ್ ಲಸಿಕೆ ಕೊಡಬೇಕು ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಮುನಿಗ್ಯಾಳ ಒತ್ತಾಯಿಸಿದರು.

ಲಾಕ್‍ಡೌನ್ ಕಾರಣ ಶೇ 90ರಷ್ಟು ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ದಿನ ಬೆಳಗಾಗುವುದರೊಳಗೆ ಮನೆ ಬಾಗಿಲಿಗೆ ಪತ್ರಿಕೆ ಮುಟ್ಟಿಸುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ಹೇಳಿದರು.

ಕೋಶಾಧ್ಯಕ್ಷ ಗಂಗಪ್ಪ ಸಾವಳೆ ಹಾಜರಿದ್ದರು.