ಪತ್ರಿಕಾ ವಿತರಕರಿಗೆ ಫುಡ್ ಕಿಟ್

ಚಿತ್ರದುರ್ಗ.ಜೂ.೪;  ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ  ಡಾ. ಶಿವಮೂರ್ತಿ ಮುರುಘಾ ಶರಣರು ಲಾಕ್‌ಡೌನ್‌ನಿಂದಾಗಿ ತೊಂದರೆ ಅನುಭವಿಸುತ್ತಿರುವ ಪತ್ರಿಕಾ ವಿತರಕರು, ಬಸ್ ಚಾಲಕರು ಮತ್ತು ನಿರ್ವಾಹಕರು, ಕಟ್ಟಡ ಕಾರ್ಮಿಕರು ಮತ್ತು ವಿವಿಧೆಡೆ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ಸೇರಿದಂತೆ 125 ಜನರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು. ಇಂದಿನ ದವಸ ಧಾನ್ಯ ದಾಸೋಹವನ್ನು ಸರ್ ಎಂ.ವಿ. ಕಾಲೇಜು, ದಾವಣಗೆರೆ, ಜಿ.ಇ. ವಿಜಯಕುಮಾರ್ ರಾಣೇಬೆನ್ನೂರು ಮತ್ತು ಪಿ.ವೀರೇಂದ್ರಕುಮಾರ್ ಚಿತ್ರದುರ್ಗ ಇವರು ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎ.ಜೆ.ಪರಮಶಿವಯ್ಯ, ಪತ್ರಕರ್ತರಾದ ಅರುಣ್‌ಕುಮಾರ್, ಲಕ್ಷö್ಮಣ್, ಪಿ.ವೀರೇಂದ್ರಕುಮಾರ್, ಬಸವರಾಜ್ ಗಡ್ಡೆಪ್ಪನವರ್, ಹಾಲಪ್ಪನಾಯಕ ಮೊದಲಾದವರಿದ್ದರು.