ಪತ್ರಿಕಾ ಭವನ ಮಂಜೂರಿಗೆ ಒತ್ತಾಯ

ಗದಗ,ಮಾ25 : ಜಿಲ್ಲೆಯ ಗಜೇಂದ್ರಗಡ ತಾಲೂಕಾ ಕೇಂದ್ರವಾಗಿ 2 ವರ್ಷಗಳೇ ಗತಿಸುತ್ತಿವೆ ಆದರೆ ಇದುವರೆಗೂ ಯಾವುದೇ ರೀತಿಯ ಸೌಲಭ್ಯಗಳನ್ನು ಮಾತ್ರ ಕಂಡಿಲ್ಲ. ಸದ್ಯ ಪತ್ರಕರ್ತರ ಭವನ ಅವಶ್ಯಕತೆಯಿದ್ದು ಪತ್ರಿಕಾ ಭವನ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿಯವರಿಗೆ ಮನವಿ ಸಲ್ಲಿಸಿದರು.

ಗದಗ ಜಿಲ್ಲಾಧ್ಯಕ್ಷ ಚೆನ್ನು ಸಮಗಂಡಿ ಮಾತನಾಡಿ, ಕೊರೊನಾ ಸಮಯದಲ್ಲಿ ಪತ್ರಕರ್ತರ ಆರ್ಥಿಕ ಸ್ಥಿತಿಗತಿ ಅತಂತ್ರವಾಗಿದೆ. ಆದರೂ ಸ್ವಾಭಿಮಾನಕ್ಕೆ ಧಕ್ಕೆಬಾರದ ರೀತಿಯಲ್ಲಿ ನಮ್ಮವರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಗಜೇಂದ್ರಗಡ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಇಡೀ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಸಂಘದ ಸದಸ್ಯರು ವರದಿ ಮಾಡಿಕೊಂಡು ಬಂದ ನಂತರ ಅವರಿಗೆ ಒಂದೆಡೆ ಕುಳಿತು ಸುದ್ದಿ ಮಾಡಲು ಪತ್ರಿಕಾ ಭವನದ ಅವಶ್ಯಕತೆಯಿದ್ದು ಪುರಸಭೆ ವತಿಯಿಂದ ಮಾಧ್ಯಮದವರಿಗೆ ಪತ್ರಿಕಾ ಭವನ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು .