ಬೀದರ:ಜು.8: ಪತ್ರಿಕಾ ದಿನಚಾರಣೆಯನ್ನು ಎಲ್ಲಾ ಪತ್ರಕರ್ತ ಸಂಘಗಳು ಒಟ್ಟಾರೆ ಸೇರಿ ನೂತನವಾಗಿ ನಿರ್ಮಾಣವಾದ ಪತ್ರಿಕಾ ಭವನದಲ್ಲಿ ವಿಜೃಂಭಣೆಯಿಂದ ಆಚರಿಸೋಣ ಎಂದು ಮಾನ್ಯತೆ ಪಡೆದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬು ವಾಲಿಯವರ ಅಧ್ಯಕ್ಷತೆಯಲ್ಲಿ ಕರೆದ ಸಭೆಯಲ್ಲಿ ಬಾಬು ವಾಲಿಯವರ ಪ್ರಸ್ತಾಪಕ್ಕೆ ವಿಭಾಗÀ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಡಿಕೆ ಸಹಮತ ನೀಡಿದರು. ಈ ಬಾರಿ ಎಲ್ಲಾ ಪತ್ರಕರ್ತರು ಒಂದಾಗಿ ಒಟ್ಟಾಗಿ ಪತ್ರಿಕೆ ದಿನಾಚರಣೆ ಆಚರಿಸಲು ತೀರ್ಮಾನಿಸಿ ಪತ್ರಿಕಾ ರಂಗಕ್ಕೆ ಒಂದು ಒಳ್ಳೆಯ ಬೆಳವಣಿಗೆಗೆ ನಾವೆಲ್ಲರೂ ಸಾಕ್ಷಿಯಾಗೋಣ ಎಂಬ ಅಭಿಪ್ರಾಯ ಪಟ್ಟರು.
ಪ್ರಜ್ವಲ ಸವಾಲುಗಳು, ಪತ್ರಿಕಾ ರಂಗದ ಮಹತ್ವ, ಈಗ ಹೆಚ್ಚುತ್ತಿರುವ ನಕಲಿ ಪತ್ರಕರ್ತರ ಮತ್ತು ಯ್ಯೂಟ್ಯೂಬ್ ಚಾನೆಲ್‍ಗಳ ಹಾವಳಿ ಹಾಗೂ ಇದರಿಂದ ಮಾಧ್ಯಮಕ್ಕೆ ಬರುತ್ತಿರುವ ಕೆಟ್ಟ ಹೆಸರಿನ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತ ಪಡಿಸಿ ಇದಕ್ಕೆ ಕಡಿವಾಣ ಹಾಕಲು ತೀರ್ಮಾನಿಸಲಾಯಿತು.
ವಿಚಾರ ಸಂಕೀರ್ಣಗಳು ಮತ್ತು ಮಾಧ್ಯಮದ ಮಹತ್ವ ಕುರಿತು ಚರ್ಚೆಗಳು ನಡೆಯಲಿ ಎಂದು ಹಿರಿಯ ಪತ್ರಕರ್ತರ ಗಂಧರ್ವ ಸೇನಾ ಖಾದ್ರಿ ನಡೆಯಲಿ ಎಂದರು. ಜಿಲ್ಲಾ ಮಟ್ಟದ ಪ್ರೇಸ್ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸುವ ಸಲಹೆಯನ್ನು ಮಾಳಪ್ಪ ಅಡಸಾರೆ ನೀಡಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾನ್ಯತೆ ಪಡೆದ ಪತ್ರಕರ್ತರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘ, ರಾಜ್ಯಮಟ್ಟದ ಪತ್ರಿಕೆಗಳು ಟಿವಿ ಮಾಧ್ಯಮಗಳು, ಛಾಯಗ್ರಾಹಕರು, ಮಾನ್ಯತೆ ಪಡೆದವರು, ನಿರ್ಮಾಣ ಸಮಿತಿ ರಚಿಸಿಕೊಂಡು ಪತ್ರಕರ್ತರ ಭವನ ಕಾರ್ಯ ಚಟುವಟಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಾಗುವುದು ಎಂಬ ಅಭಿಪ್ರಾಯ ಸಭೆಯಲ್ಲಿ ಒಮ್ಮತದಿಂದ ತೆಗೆದುಕೊಳ್ಳಲಾಯಿತು. ಪತ್ರಕರ್ತರ ಸಭೆಯಲ್ಲಿ ಒಮ್ಮತದ ನಿರ್ಣಯದಿಂದ ಪತ್ರಿಕಾ ದಿನಾಚರಣೆ ಆಚರಣೆ ಮಾಡುತ್ತಿರುವುದು ಸ್ವಾಗತರ್ಹವಾಗಿದೆ ಎಂದು ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಅಧಿಕಾರಿ ಸುರೇಶ ನುಡಿದರು.
ಕಾರ್ಯಕ್ರಮದ ನಿರ್ವಣೆಯನ್ನು ಮಾಳಪ್ಪ ಅಡಸಾರೆ ನೆರವೇರಿಸಿಕೊಟ್ಟರು. ಸಭೆಯಲ್ಲಿ ಭೀಮರಾವ್, ಗುರುರಾಜ ಕುಲಕರ್ಣಿ, ಶಶಿಕುಮಾರ ಬೆಂಬುಳಗೆ, ಶಶಿಕುಮಾರ ಪಾಟೀಲ, ಅಬ್ದುಲ್ ಖದೀರ, ಗುರು, ಗೋಪಿ, ಸಾವನ್, ಸುನೀಲ ಹೊನ್ನಾಳೆ, ಶಶಿಕಾಂತ ದಿಕ್ಷಿತ, ವಿರೂಪಾಕ್ಷ ಗಾದಗಿ, ಪೃಥ್ವಿರಾಜ್ ಎಸ್. ಜಗನ್ನಾಥ ಜೀರ್ಗಾ, ಸೈಯದ್ ಹುಸೇನ್ ಖಾದ್ರಿ, ಉದಯ ಜೀರ್ಗೆ, ಮಲ್ಲಿಕಾರ್ಜುನ್ ಪಬ್ಲಿಕ್ ಟಿವಿ, ಶ್ರೀನಿವಾಸ ಚೌದರಿ, ಶಶೆಕಾಂತ ಪ್ರಜಾವಾಣಿ, ಅನಿಲಕುಮಾರ ಕುಲಕರ್ಣೀ, ದಿಲೀಪ ಕುಮಾರ ಮೇತ್ರೆ, ಖಾಜಿ ಅಲಿಯುದ್ದೀನ್ ಹಾಗೂ ಇತರರಿದ್ದರು.