ಪತ್ರಿಕಾ ದಿನಾಚರಣೆ; ಪ್ರಶಸ್ತಿ ಪ್ರದಾನ ಪತ್ರಕರ್ತರ ಮಾನ್ಯತೆ ನಿಯಮ ಸಡಿಲಿಕೆ :ಡಾ.ಶರಣಪ್ರಕಾಶ್ ಭರವಸೆ

ಕಲಬುರಗಿ,ಜು 31: ಸರಕಾರದಿಂದ ಪತ್ರಕರ್ತರಿಗೆ ಮಾನ್ಯತೆ ( ಅಕ್ರಿಡೇಷನ್) ನೀಡುವ ನಿಯಮಗಳನ್ನು ಸಡಿಲಿಕೆ ಮಾಡಲು ಪ್ರಾಮಾಣಿಕ ಯತ್ನ ನಡೆಸಲಾಗುವದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಭರವಸೆ ನೀಡಿದರು.
ಅವರಿಂದು ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಶ್ರೀನಿವಾಸರಾವ್ ರಘೋಜಿ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಪತ್ರಿಕಾ ದಿನಾಚರಣೆ,ವಿ.ಎನ್.ಕಾಗಲಕರ್ ಪ್ರಶಸ್ತಿ ಮತ್ತು 2023ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಸಿ,ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪತ್ರಕರ್ತರ ಜೀವನ ಕಷ್ಟಕರವಾಗಿದೆ.ಅವರಿಗೆ ಸೇವಾಭದ್ರತೆ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ವಾರ್ತಾ ಇಲಾಖೆ ಪತ್ರಕರ್ತರಿಗೆÀ ಮಾನ್ಯತೆ ನೀಡುವ ನಿಯಮಗಳನ್ನು ಸಡಿಲಿಕೆ ಮಾಡುವ ಕುರಿತಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವದು ಎಂದರು.
ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಅತ್ಯುತ್ತಮ ವ್ಯವಸ್ಥೆಯಾಗಿದ್ದು, ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿರುವದು ಆತಂಕಕಾರಿಯಾಗಿದೆ.ಮಾಧ್ಯಮ ಅದರಲ್ಲೂ ಮುದ್ರಣ ಮಾಧ್ಯಮ ಇಂದಿನ ಆಧುನಿಕ ವ್ಯವಸ್ಥೆಯ ಜೊತೆ ಹೆಜ್ಜೆ ಹಾಕುವ ಅನಿವಾರ್ಯತೆ ಇದೆ ಎಂದರು.
ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ನೀಡುವದು ಮತ್ತು ವಿ.ಎನ್.ಕಾಗಲಕರ್ ಪ್ರಶಸ್ತಿಯನ್ನು ಸರಕಾರದ ಮಟ್ಟದಲ್ಲಿ ನೀಡುವ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವದು ಎಂದು ಸಚಿವರು ಸ್ಪಷ್ಟಭರವಸೆ ನೀಡಿದರು.
ಪ್ರಶಸ್ತಿ ಪ್ರದಾನ:
ವಿ.ಎನ್.ಕಾಗಲಕರ್ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕದ ಹಿರಿಯ ವರದಿಗಾರರಾಗಿದ್ದ ದಿ.ಜಯತೀರ್ಥ ಕಾಗಲಕರ್ ಅವರರಿಗೆ ಮರಣೋತ್ತರವಾಗಿ ನೀಡಲಾಗಿದ್ದು, ದಿ.ಜಯತೀರ್ಥ ಕಾಗಲಕರ್ ಅವರ ಪತ್ನಿ ಮಂಜುಳಾ ಕಾಗಲಕರ್ ಮತ್ತು ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಸಂಧ್ಯಾಕಾಲ ಪತ್ರಿಕೆಯ ಸಂಪಾದಕ ಡಿ.ಶಿವಲಿಂಗಪ್ಪ ಅವರಿಗೆ ಪ್ರದಾನ ಮಾಡಲಾಯಿತು.
ವಾರ್ಷಿಕ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕ ರಾಘವೇಂದ್ರ ದೇಸಾಯಿ, ಸಂಜೆವಾಣಿ ಹಿರಿಯ ವರದಿಗಾರ ಮಹೇಶ್ ಕುಲಕರ್ಣಿ, ವಿಜಯ ಕರ್ನಾಟಕ ಹಿರಿಯ ವರದಿಗಾರ ಡಾ.ವೆಂಕಟೇಶ್ ಏಗನೂರ್, ವಿಜಯ ಕರ್ನಾಟಕ ಚಿತ್ತಾಪುರ ವರದಿಗಾರ ಕಾಶಿನಾಥ ಗುತ್ತೇದಾರ್, ವಿಜಯವಾಣಿ ಹಿರಿಯ ಉಪಸಂಪಾದಕ ಚನ್ನಬಸಯ್ಯ ಗುರುವಿನ, ಸಂಯುಕ್ತ ಕರ್ನಾಟಕ ಫರಹತಾಬಾದ್ ವಲಯ ವರದಿಗಾರ ಗುರುಬಸಪ್ಪ ಸಜ್ಜನಶೆಟ್ಟಿ, ಶಾಸನ ಪತ್ರಿಕೆ ಹಿರಿಯ ಉಪಸಂಪಾದಕ ಸತೀಶ್ ಜೇವರ್ಗಿ, ಸತ್ಯಕಾಮ ಪತ್ರಿಕೆ ಸಂಪಾದಕ ಆನಂದ ಮಣೂರ್, ದಿಗ್ವಿಜಯ ನ್ಯೂಸ್ ಚಾನಲ್ ವರದಿಗಾರ ಓಂಪ್ರಕಾಶ್ ಮುನ್ನೂರ್, ಫ್ಯಾಷನ್ ಪೀಪಲ್ ಪತ್ರಿಕೆ ಸಂಪಾದಕ ಮಲ್ಲಿಕಾರ್ಜುನ ವಿ.ಎನ್., ಪಬ್ಲಿಕ್ ಟಿವಿ ಕ್ಯಾಮರಾಮ್ಯಾನ್ ಮನೀಷ್ ಪವಾರ್, ವಿಜಯವಾಣಿ ಕಮಲಾಪುರ ವರದಿಗಾರ ಸುರೇಶ್ ಲೇಂಗಟಿ, ಕನ್ನಡಬಂಧು ಸಂಪಾದಕ ಗುರುರಾಜ ಕುಲಕರ್ಣಿ, ವಿಜಯ ಗುಲ್ಬರ್ಗ ಪತ್ರಿಕೆ ಸಂಪಾದಕ ಬಾಲಾಜಿ ಚಿತ್ತೇಕರ್, ಕನ್ನಡಪ್ರಭ ಛಾಯಾಗ್ರಾಹಕ ಸುನಿಲ್ ರೆಡ್ಡಿ ಉದನೂರ್, ನೃಪತುಂಗ ಅಫಜಲಪುರ ತಾಲೂಕು ವರದಿಗಾರ ಅಶೋಕ್ ಕಲ್ಲೂರ್, ವಿಜಯ ಕರ್ನಾಟಕ ಅಫಜಲಪುರ ತಾಲೂಕು ವರದಿಗಾರ ಶಕೀಲ್ ಚೌಧರಿ, ಉದಯಕಾಲ ಸೇಡಂ ವರದಿಗಾರ ರಾಧಾಕೃಷ್ಣ ಕೆ., ಇನ್ಕ್ವಿಲಾಬ್-ಎ-ಡೆಕ್ಕನ್ ಪತ್ರಿಕೆಯ ಛಾಯಾಗ್ರಾಹಕ ಮುಜೀಬ್ ಅಲಿಖಾನ್ ಹಾಗೂ ಉದಯವಾಣಿ ಜೇವರ್ಗಿ ವರದಿಗಾರ ಪ್ರಸನ್ನ (ಪುನೀತ್) ಕುಲಕರ್ಣಿ ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಎಸ್ಪಿ ಇಶಾ ಪಂತ್, ಕಲಬುರಗಿ ಪೆÇಲೀಸ್ ಕಮಿಷನರ್ ಚೇತನ್ ಆರ್., ಯುನೈಟೆಡ್ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಕ್ರಮ್ ಸಿದ್ಧಾರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಸಿದ್ದೇಶ್ವರಪ್ಪ,ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್,ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರು , ಶರಣು ಜಿಡಗಾ ಅವರು ಆಗಮಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಅವರುಅಧ್ಯಕ್ಷತೆ ವಹಿಸಿದ್ದರು.
ಸಂಗಮನಾಥ ರೇವತಗಾಂವ ಸ್ವಾಗತಿಸಿದರು.ರಾಜು ಉದನೂರ ನಿರೂಪಿಸಿದರು.ಸಂಘದ ಪದಾಧಿಕಾರಿಗಳಾದ ರಾಮಕೃಷ್ಣ ಬಡಶೇಷಿ, ಸುರೇಶ್ ಬಡಿಗೇರ, ದೇವೇಂದ್ರಪ್ಪ ಅವಂಟಿ, ಮಲ್ಲಿಕಾರ್ಜುನ ಜೋಗ್ ಅವರು ಸೇರಿದಂತೆ ಜಿಲ್ಲೆಯ ಗಣ್ಯರು, ಪತ್ರಕರ್ತರು,ಪತ್ರಕರ್ತರ ಕುಟುಂಬದವರು ಉಪಸ್ಥಿತರಿದ್ದರು.