ಪತ್ರಿಕಾ ದಿನಾಚರಣೆ: ಪ್ರಶಸ್ತಿ ಪ್ರದಾನ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ14: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನೆಯನ್ನು ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರ ಹಾಗೂ ಭ್ರಷ್ಟಾಚಾರ ಎರಡು ಒಂದೆ ಕಡೆ ಇರುತ್ತದೆ ಆದ್ದರಿಂದ ಅಧಿಕಾರದಲ್ಲಿ ಇರುವವರು ಉತ್ತಮ ಕಾರ್ಯ ಮಾಡಬೇಕು. ವಿಶೇಷವಾಗಿ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಸಮಾಜದಲ್ಲಿ ಏನೇ ಬದಲಾವಣೆ ಮಾಡಬೇಕಾದರೇ ಅದೂ ಪತ್ರಕರ್ತರಿಂದ ಮಾತ್ರ ಸಾಧ್ಯ. ಹೀಗಾಗಿ ಪತ್ರಕರ್ತರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಮನೋಜ್ ಪಾಟೀಲಕುಲಕರ್ಣಿ, ಅವ್ವ ಪತ್ರಕರ್ತ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತೆ ಚಂದ್ರಿಕಾ ನಾಯಕ ಅವರಿಗೆ ನೀಡಿ ಸನ್ಮಾನ ಮಾಡಲಾಯಿತು.
ಮೊಹಮ್ಮದ್ ಶರೀಫ್ (ಪ್ರಜಾವಾಣಿ), ಕಾಶಪ್ಪ ಕರದಿನ್ (ವಿಜಯ ಕರ್ನಾಟಕ), ವಿರೇಶ್ ಹಾರೂಗೇರಿ (ವಿಜಯವಾಣಿ-ಕಲಘಟಗಿ), ಈಶ್ವರಪ್ರಭು ಈಸರಗೊಂಡ (ವಿಜಯವಾಣಿ, ಉಪ್ಪಿನಬೆಟಗೇರಿ) ನಿಜಗುಣಿ ದಿಂಡಲಕೊಪ್ಪ (ವಿಜಯ ಕರ್ನಾಟಕ-ಧಾರವಾಡ), ಈರಪ್ಪ ನಾಯ್ಕರ್ (ಕನ್ನಡಪ್ರಭ-ಹುಬ್ಬಳ್ಳಿ), ಅರುಣ ಹೆಗಡೆ (ಸಂಯುಕ್ತ ಕರ್ನಾಟಕ-ಹುಬ್ಬಳ್ಳಿ), ರವಿಕುಮಾರ್ ಕಗ್ಗಣ್ಣವರ (ಕನ್ನಡಮ್ಮ-ಧಾರವಾಡ), ಪವನಕುಮಾರ್ ಎಚ್ (ಡೆಕ್ಕನ್ ಹೆರಾಲ್ಡ್-ಹುಬ್ಬಳ್ಳಿ), ಮಂಜುನಾಥ ಹೆಗಡೆ (ಡೆಕ್ಕನ್ ಹೆರಾಲ್ಡ್-ಹುಬ್ಬಳ್ಳಿ), ವೆಂಕಟೇಶ ಲಾಳಗೆ (ಕನ್ನಡಪ್ರಭ-ಹುಬ್ಬಳ್ಳಿ), ವಿಶ್ವನಾಥ ಹೊಸೂರ (ವಿಜಯವಾಣಿ-ಹುಬ್ಬಳ್ಳಿ), ರಾಮಚಂದ್ರ ಕುಲಕರ್ಣಿ (ಸಂಯುಕ್ತ ಕರ್ನಾಟಕ-ಧಾರವಾಡ) ಶಿವರಾಜ ವಿಶ್ವನಾಥ ( ಎಂ.ಎ.ಪತ್ರಿಕೋದ್ಯಮಿ ವಿದ್ಯಾ ಕೆ.ಯು.ಡಿ, ಯಲ್ಲಪ್ಪ ಸೋಲಾರಗೊಪ್ಪ (ಟಿವಿ-5 ವರದಿಗಾರರು-ಹುಬ್ಬಳ್ಳಿ), ಭರತ ಮಂಗಳಗಟ್ಟಿ (ಟಿವಿ5 ಕ್ಯಾಮರಾಮನ್-ಹುಬ್ಬಳ್ಳಿ), ಪ್ರಕಾಶ ಹಿರೇಮಠ(ದಿಗ್ವಿಜಯ ನ್ಯೂಸ್-ವರದಿಗಾರರು, ಹುಬ್ಬಳ್ಳಿ), ವಿನಾಯಕ ಪೂಜಾರಿ(ದಿಗ್ವಿಜಯ ನ್ಯೂಸ್- ಕ್ಯಾಮರಾಮನ್- ಹುಬ್ಬಳ್ಳಿ) ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಮಾಧ್ಯಮ ಸಂಯೋಜಕರಾದ ಕೆ.ವಿ.ಪ್ರಭಾಕರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ವಹಿಸಿದ್ದರು. ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.