ಪತ್ರಿಕಾ ದಿನಾಚರಣೆ ಕಾರ್ಯಕ್ರಮ

ಶಿರಹಟ್ಟಿ,ಜು.31: ವರದಿಗಾರರು ವೃತ್ತಿ ಧರ್ಮಪಾಸುವುದು ಅಗತ್ಯವಿದೆ ಎಂದು ಫ.ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಅವರು ಶ್ರೀ ಫಕೀರೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕದ ಸಹಯೋಗದಲ್ಲಿ ತಾಲೂಕಾ ಘಟಕದ ವತಿಯಿಂದ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದರು.
ವರದಿಗಾರರು ಸಹ ಸತತ ಅಧ್ಯಯನಶೀಲರಾಗಿ, ಸಮಾಜ ಶಾಂತಿ ಯಿಂದ ಬದುಕಬೇಕಾದರೆ ಅದಕ್ಕೆ ತಕ್ಕ ಹಾಗೆ ಲೇಖನಗಳು, ವರದಿಗಳು ವ್ಯಕ್ತವಾಗಬೇಕು. ಇತಿಹಾಸವನ್ನು ಅರಿತು ತಮ್ಮ ವೃತ್ತಿಧರ್ಮ ಪಾಲಿಸಿದರೆ ನಾಡು ಸುಭೀಕ್ಷೆಯಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ, ಸಂವಿಧಾನದ 4ನೇ ಅಂಗವಾಗಿ ಪತ್ರಿಕಾರಂಗ ಸಮಾಜವನ್ನು ತಿದ್ದುವುದರ ಮೂಲಕ ಕೋವಿಡ್‍ನಂತರ ಸಂದಿಗ್ದ ಪರಿಸ್ಥಿತಿಯಲ್ಲೂ ತಮ್ಮ ಕೆಲಸವನ್ನು ಮಾಡುತ್ತಾ ಬಂದಿದ್ದು, ಈ ಎಲ್ಲ ವೃತ್ತಿಬಾಂಧವರಿಗೆ ನಾನು ಸದಾ ಚಿರರುಣಿಯಾಗಿರುತ್ತೇನೆ ಎಂದರು.
ಉಪನ್ಯಾಸ ನೀಡಿದ ರಾಜ್ಯ ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ, ವಿಮರ್ಶಿಸುವ ಹಕ್ಕು ಮಾಧ್ಯಮದವರಿಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ದೇಶವನ್ನು ಕಾಡುತ್ತಿರುವಂತಹ ಭ್ರಷ್ಟಾಚಾರ, ಅನಕ್ಷರತೆ ಮತ್ತು ವರದಕ್ಷಿಣೆ ಪಿಡುಗುಗಳ ವಿರುದ್ದ ಮಾಧ್ಯಮ ಎಷ್ಟೇ ವರದಿ ಬಿತ್ತಿರಿಸುತ್ತಾ ಬಂದರೂ ಈ ಪಿಡುಗುಗಳು ಇನ್ನೂ ಕಡಿಮೆಯಾಗಿಲ್ಲ. ಸಮಾಜವನ್ನು ಜಾಗೃತಿಗೊಳಿಸುವ ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಸರಕಾರ ಕೂಡಲ ಪತ್ರಕರ್ತರಿಗೆ ಆರ್ಥಿಕ ಭದ್ರತೆ ಮುಂತಾದ ಸೌಲಭ್ಯಗಳನ್ನು ನೀಡಬೇಕೆಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಇಂದಿನ ಡಿಜಿಟಲೀಕರಣ ಯುಗದಲ್ಲಿ ನೈಜ ಸುದ್ದಿಯನ್ನು ಬರೆಯುವುದರ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚು ಮಾಡುತ್ತಾ, ನಮ್ಮ ವೃತ್ತಿಯ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ವರದಿಗಾರರು ಕಾಪಾಡಿಕೊಂಡು ಹೋಗಬೇಕೆಂದು ಹೇಳಿದರು.
ಮುಖಂಡರಾದ ಡಾ: ಚಂದ್ರು.ಲಮಾಣಿ, ಡಾ: ಭೀಮಸಿಂಗ್ ರಾಠೋಡ, ಭರತ್ ನಾಯಕ, ಸಿಪಿಐ ವಿಕಾಸ ಲಮಾಣಿ, ಎಂ.ಕೆ.ಲಮಾಣಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನಿಪ ಸಂಘದ ತಾಲೂಕಾಧ್ಯಕ್ಷ ಜಿ.ಬಿ.ಹೆಸರೂರ ವಹಿಸಿದ್ದರು, ಕಾನಿಪ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚವಡಿ, ಪಪಂ ಅಧ್ಯಕ್ಷೆ ಗಂಗವ್ವ ಆಲೂರ, ಉಪಾಧ್ಯಕ್ಷ ದೇವಪ್ಪ ಆಡೂರ, ವಿಶ್ವನಾಥ ಕಪ್ಪತ್ತನವರ, ವಿರುಪಾಕ್ಷಪ್ಪ ಅಣ್ಣಿಗೇರಿ, ಶರಣಬಸವಗೌಡ ಪಾಟೀಲ, ನಾಗರಾಜ ಲಕ್ಕುಂಡಿ, ಎಚ್.ಡಿ.ಮಾಗಡಿ, ವೈ.ಎಸ್.ಪಾಟೀಲ, ಫಕ್ಕೀರೇಶ ರಟ್ಟಿಹಳ್ಳಿ, ರಾಮಣ್ಣ ಡಂಬಳ, ಎನ್.ಆರ್.ಕುಲಕರ್ಣಿ, ಶಿವಣ್ಣ ಎಸ್, ಸುರೇಶ ಕಪ್ಪತ್ತನವರ, ಎಸ್.ಬಿ.ಹೊಸೂರ, ಕೆ.ಎ.ಬಳಿಗೇರ, ಸುಧಾ ಹುಚ್ಚಣ್ಣವರ, ಮಹದೇವಪ್ಪ ಸ್ವಾಮಿ,ಚಂದ್ರು ಕುಸಲಾಪೂರ ಎ.ಎಚ್.ಖಾಜಿ, ರಾಘವೇಂದ್ರ ಕುಲಕರ್ಣಿ, ಶಿವಾನಂದ ಕುಳಗೇರಿ, ನಿಂಗರಾಜ ಹಮ್ಮಿಗಿ, ಶಶಿಧರ ಶಿರಸಂಗಿ, ಪ್ರದೀಪ ಮಾಲಸೂರೆ, ಉಮೇಶ ಗುಗ್ಗರಿ ಮುಂತಾದವರು ಉಪಸ್ಥಿತರಿದ್ದರು.