ಪತ್ರಿಕಾ ಜೀವನ ಗರಗಸದಂತೆ ಹೋಗುತ್ತಲೂ, ಬರುತ್ತಲೂ ಕೊಯ್ಯುತ್ತದೆ

ಬೀದರ:ಮಾ.27: ಪತ್ರಿಕಾ ಜೀವನ ಗರಗಸದಂತೆ ಹೋಗುತ್ತಲೂ ಕೊಯ್ಯುತ್ತದೆ, ಬರುತ್ತಲೂ ಕೊಯ್ಯುತ್ತದೆ. ಜನ ತಿಳಿದಂತೆ ನಮ್ಮ ಜೀವನ ಸುಂದರವಾಗಿರಲ್ಲ. ಎಂದು ಪತ್ರಕರ್ತ ಸದಾನಂದ ಜೋಷಿ ನುಡಿದರು.

ಜಿಲ್ಲಾ ಕಸಾಪದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿರುವ ಶ್ರೀಕೃಷ್ಣ ದರ್ಶಿನಿ ಉಡುಪಿ ಹೋಟೇಲ್‍ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸದಾನಂದ ಜೋಷಿ ಅವರ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಮಾಧ್ಯಮ ಹಾಗೂ ಸಮಾಜೋಸಾಂಸ್ಕøತಿಕ ಬದುಕಿನ ಜೀವನಾನುಭವಗಳನ್ನು ಹಂಚಿಕೊಳ್ಳುತ್ತ ಬಡತನದಿಂದ ಬಂದರೂ ಯಾವತ್ತೂ ಅಧೀರವಾಗಿಲ್ಲ. ಏನೇನೋ ಶ್ರಮಪಟ್ಟು ಎಲ್ಲೇಲ್ಲೋ ಸುತ್ತಾಡಿ ಪತ್ರಿಕೆ ಸೇರಿಕೊಂಡೆ. ಪತ್ರಿಕಾ ರಂಗದಲ್ಲಿ ನನಗೆ ಶಿವಶರಣಪ್ಪ ವಾಲಿಯವರೆ ಗುರು, ಮಾರ್ಗದರ್ಶಕ ಎಲ್ಲ. ಹಗಲಿರುಳೂ ದುಡಿದೆ. ಮುಂದೆ ಪತ್ರಿಕೆ ನಂಬರ್ ಒನ್ ಆಗಲು ಬಹುದೊಡ್ಡ ಸವಾಲುಗಳನ್ನು ಎದುರಿಸಿದ್ದೇವೆ. ಕಾಯಕ ನಿಷ್ಠೆ ಅದಕ್ಕೆ ಮುಖ್ಯ ಕಾರಣ. ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವಾದ ಸಂತೃಪ್ತಿ ಇದೆ. ಪತ್ರಿಕೆಯಲ್ಲಿ ಧನಾತ್ಮಕ ವಿಷಯಗಳಿರಬೇಕು. ಆದರೆ ಬದಲಾದ ಜಗತ್ತಿನಲ್ಲಿ ಪತ್ರಕರ್ತರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಹಾಗೆ ಸಾಹಿತಿಗಳನ್ನು ನೋಡುವ ದೃಷ್ಟಿಕೋನ ಕೂಡ ಬದಲಾಗಿದೆ. ಪ್ರಾಮಾಣಿಕವಾಗಿದ್ದರೆ ಯಾವುದೆ ಸಮಸ್ಯೆಗಳು ಎದುರಾಗೊದಿಲ್ಲ ಎಂದು ನುಡಿದರು.

ಸದ್ಗುರು ವಿದ್ಯಾಲಯ ಭಾಲ್ಕಿಯ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಮುದ್ದಾ ಹಾಗೂ ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿಯವರು ನಡೆಸಿಕೊಟ್ಟ ಸಂವಾದಕ್ಕೆ ಪ್ರತಿಕ್ರಯಿಸಿ ಮಾತನಾಡಿದ ಜೋಷಿಯವರು ಓದುಗರು ನ್ಯಾಯಾಧೀಶರ ಸ್ಥಾನದಲ್ಲಿದ್ದಾರೆ. ಸರಿ ತಪ್ಪುಗಳನ್ನು ಅವಲೋಕನ ಮಾಡುತ್ತಾರೆ. ಕನ್ನಡ ಪತ್ರಿಕೆ ಅಳಿಯಬಾರದು. ಪತ್ರಿಕಾ ವೃತ್ತಿ ಯಾವತ್ತೂ ಭಾರವೆನಿಸಿಲ್ಲ. ಉದಯೋನ್ಮುಖ ಪತ್ರಕರ್ತರಲ್ಲಿ ಅನುಭವದ ಕೊರತೆಯಿದೆ ಭಾಷಾ ಪ್ರಭುತ್ವವಿಲ್ಲ. ಎಲ್ಲ ರೀತಿಯ ಅನುಭವ ಬೇಕು. ಪತ್ರಕರ್ತರಾಗಲು ಪದವಿ ಬೇಕಿಲ್ಲ. ಬರವಣಿಗೆ ಕೌಶಲ್ಯ ಬೇಕು. ಯುಟ್ಯುಬ್ ಚಾನಲ್ ಸಮರ್ಪಕವಾಗಿ ಧನಾತ್ಮಕ ಚಿಂತನೆಯಿಂದ ಕೂಡಿದ್ದರೆ ಸ್ವಾಗತಿಸಬೇಕು ಎಂದು ನುಡಿದರು.

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ, ಕನ್ನಡ ಶಾಲೆಗಳನ್ನು ಉಳಿಸಲು ಪರಿಷತ್ತು ಗಟ್ಟಿ ಧ್ವನಿ ಎತ್ತಬೇಕು. ಇಲ್ಲಿ ಕನ್ನಡ ಕಟ್ಟುವ ಕೆಲಸ ನಡೆಯಬೇಕು. ಕನ್ನಡ ಒಣಪ್ರತಿಷ್ಠೆ ಆಗಬಾರದು ಹಾಗೇಯೆ ಕನ್ನಡ ಕಾರ್ಯಕ್ರಮ ಚುನಾವಣೆ ರಾಜಕೀಯ ಕೇಂದ್ರಿತವಾಗದೆ ಸಂಸ್ಕøತಿ ಕೇಂದ್ರಿತವಾಗಬೇಕು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಮಾತನಾಡುತ್ತ ದಾಸನಾಗಿ ಬದುಕದೆ ಬರೆದು ಬದುಕಬೇಕು. ಅಂಥ ಕೆಲಸವನ್ನು ಸದಾನಂದ ಜೋಷಿಯವರು ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ ಮಾತನಾಡಿ, ಚನಶೆಟ್ಟಿ ಕರ್ತವ್ಯ ನಿಷ್ಠೆಯೊಂದಿಗೆ ಮಾನವೀಯ ಹೃದಯವುಳ್ಳವರು, ಅವರ ಕ್ರಿಯಾಶೀಲತೆ, ಕನ್ನಡಪರ ಹಾಗೂ ಜೀವ ಕಾರುಣ್ಯದ ಸಮಾಜಮುಖಿ ಚಿಂತನೆ ಅಭಿನಂದನಾರ್ಹವಾಗಿದೆ ಎಂದು ನುಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಎಂ. ಎಸ್. ಮನೋಹರ ಅಧ್ಯಕ್ಷತೆ ವಹಿಸಿದರು.

ಸಾಹಿತಿಗಳಾದ ಎಂ. ಜಿ ದೇಶಪಾಂಡೆ, ಚಂದ್ರಪ್ಪ ಹೆಬ್ಬಾಳಕರ, ಎಂ. ಜಿ ಗಂಗನಪಳ್ಳಿ, ಎಸ್. ಎಂ. ಜನವಾಡಕರ್, ಡಾ. ವಜ್ರಾ ಪಾಟೀಲ, ಜಗದೇವಿ ದುಬಲಗುಂಡಿ, ರಘುನಾಥ ಹಡಪದ, ಶಂಭುಲಿಂಗ ವಾಲ್ದೊಡ್ಡಿ, ಎಸ್. ಬಿ. ಕುಚಬಾಳ, ಎಸ್. ವಿ. ಕಲ್ಮಠ, ಮಾನಶೆಟ್ಟಿ ಬೆಳಕೇರಿ, ಸುನಿತಾ ದಾಡಗೆ, ಟಿ. ಜೆ. ಹಾದಿಮನಿ, ಶಿವಕುಮಾರ ಕಟ್ಟೆ, ಸುನಿತಾ ಬಿರಾದಾರ, ರಮೇಶ ಬಿರಾದಾರ, ಪಾರ್ವತಿ ವಿ. ಸೋನಾರೆ, ಶಿವಪುತ್ರ ಡಿ. ಪಾಟೀಲ, ರೇಣುಕಾ ಎನ್.ಬಿ. ಪುಷ್ಪಾ ಜಿ. ಕನಕ, ಓಂಪ್ರಕಾಶ ದಡ್ಡೆ, ದಾನಿ ಬಾಬುರಾವ, ಶಾಂತಮ್ಮ ಬಲ್ಲೂರ, ಉಮದೇವಿ ಬಾಪುರೆ, ಓಂಕಾರ ಸೂರ್ಯವಂಶಿ, ರಜಿಯಾ ಬಳಬಟ್ಟಿ, ಡಾ. ಜಗದೇವಿ ತಿಬಶಟ್ಟೆ, ಡಾ. ಗೌತಮ ಬಕ್ಕಪ್ಪ, ಡಾ. ರಾಜಕುಮಾರ ಅಲ್ಲೂರೆ, ಮಾಣಿಕ ನೇಳಗೆ, ಸಿದ್ದಮ್ಮ ಸಂಗ್ರಾಮ ಬಸಣ್ಣನವರು, ಡಾ.ಸಿ ಆನಂದರಾವ ಮೊದಲಾದವರನ್ನು ಸನ್ಮಾನಿಸಲಾಯಿತು

ಡಾ. ಬಸವರಾಜ ಬಲ್ಲೂರ, ಟಿ.ಎಂ. ಮಚ್ಚೆ ಕಸ್ತೂರಿ ಪಟಪಳ್ಳಿ, ವಿದ್ಯಾವತಿ ಬಲ್ಲೂರ, ಡಾ. ಈಶ್ವರಯ್ಯ ಕೊಡಂಬಲ್. ಡಾ. ರಾಮಚಂದ್ರ ಗಣಾಪುರ, ವೈಜನಾಥ ಚಿಕಬಸೆ, ಜಗನ್ನಾಥ ಕಮಲಾಪುರೆ, ಮೊದಲಾದವರು ಭಾಗವಹಿಸಿದ್ದರು.

ಶಿವಶಂಕರ ಟೋಕರೆ ಸ್ವಾಗತಿಸಿದರೆ, ಚನ್ನಬಸವ ಹೇಡೆ ನಿರೂಪಿಸಿದರು. ಕಲ್ಯಾಣರಾವ ಚಳಕಾಪುರೆ ವಂದಿಸಿದರು.