ಪತ್ರಿಕಾ ಛಾಯಾಗ್ರಾಹಕ ಮಾರುತಿ ಅವರ ಆರೋಗ್ಯ ವಿಚಾರಿಸಿದ ಡಿ.ಸಿ

ಬೀದರ: ಮೇ.2:ಕಳೆದ ಒಂದು ವಾರದಿಂದ ಮಾಮಾ ಎಂದೇ ಕರೆಯಲ್ಪಡುವ ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಮಾರೂತಿರಾವ ತಾಂದಳೆ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಕೊವಿಡ್ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದು ವಾರದ ಹಿಂದೆ ಅವರು ಕೋವಿಡ್ ಲಸಿಕೆ ಪಡೆದಿದ್ದರು. ಆದರೆ, ಅವರಿಗೆ ನಿಶಕ್ತತೆ ಇದ್ದ ಕಾರಣ ಅದು ವರ್ಕೌಟ್ ಆಗಲಿಲ್ಲ. ಮರುದಿನವೇ ಅಂದರೆ ಹೋದ ಭಾನುವಾರ ಬ್ರಿಮ್ಸ್ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಕಳೆದ ಎರಡು, ಮೂರು ದಿನಗಳು ಅವರಿಗೆ ಹುಷಾರಾಗಿತ್ತು.ಆದರೆ, ಉಸಿರಾಟದ ತೊಂದರೆ ಮುಂದುವರೆದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಏರು, ಪೇರಾಗಿರುವ ಹಿನ್ನಲೆಯಲ್ಲಿ ಸಂಜೆವಾಣಿ ಪತ್ರಿಕೆ ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ದ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಕೂಡಲೇ ಸ್ಪಂದಿಸಿದ ಡಿ.ಸಿ ರಾಮಚಂದ್ರನ್.ಆರ್ ಅವರು ಆಸ್ಪತ್ರೆಗೆ ತೆರಳಿ, ಮಾಮಾ ಅವರ ಆರೋಗ್ಯ ವಿಚಾರಿಸಿದಲ್ಲದೇ ಅವರಿಗೆ ಟೊಮ್ಯಾಟೊ ಸೂಪ್ ಕುಡಿಸಿ, ಧೈರ್ಯವಾಗಿರಿ ಜಿಲ್ಲಾಡಳಿತ ನಿಮ್ಮೊಂದಿಗಿದೆ. ಬೇಗ ಹುಷಾರಾಗಿ ಮತ್ತೆ ಕ್ಯಾಮೆರಾ ಕೈಯಲ್ಲಿ ಹಿಡಿಯುವಂತವರಾಗಿರಿ ಎಂದು ಶುಭ ಕೋರಿದರು.

ಜಿಲ್ಲಾಧಿಕಾರಿಗಳು ಬ್ರಿಮ್ಸ್ ಕಾಲಿಡುತ್ತಿದ್ದಂತೆ ಎಚ್ಚೆತ್ತುಕೊಂಡ ಅಲ್ಲಿಯ ವೈದ್ಯರು ಅವರನ್ನು ಐ.ಸಿ.ಯುಗೆ ಶಿಫ್ಟ್ ಮಾಡಿಸಿ, ಆಕ್ಷಿಜನ್ ಪುರೈಸಿದರು. ಈ ರೀತಿಯ ಆರೋಗ್ಯ ಸೇವೆ ಜಿಲ್ಲೆಯ ಇತರೆ ಕೋವಿಡ್ ರೋಗಿಗಳಿಗೆ ವಿಸ್ತರಿಸಿದರೆ ಸಾವು, ನೋವುಗಳ ಸಂಖ್ಯೆ ಕಡಿಮೆ ಮಾಡಬಹುದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.