ಪತ್ರಾಸ್ ಶೆಡ್ಡಿಗೆ ಬೆಂಕಿ,ಮೇಕೆ ಸಹಿತ ಅಪಾರ ನಷ್ಟ

ಇಂಡಿ:ಎ.13: ತಾಲೂಕಿನ ನಾದ ಬಿಕೆ ಗ್ರಾಮದ ಪ್ರಭಾವತಿ ಸಿದ್ಧಾರಾಮ ಜಾಧವ ಇವರ ಜಮೀನು ಸವೆ9ನಂಬರ್ 159/ಅ.ಬ.ಕ ದಲ್ಲಿ ಹಲವಾರು ವಷ9ಗಳಿಂದ ಜಮೀನಿನಲ್ಲಿ ಒಂದು ಪತ್ರಾಸ್ ಶೆಡ್ಡ ನಿಮಿ9ಸಿಕೊಂಡು ವಾಸವಾಗಿದ್ದರು. ಆದರೆ ದಿನಾಂಕ 11–04–2023 ಸಾಯಂಕಾಲ 5ಘಂಟೆ ಸುಮಾರಿಗೆ ಶೆಡ್ಡಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಶೆಡ್ಡಿನಲ್ಲಿದ್ದ ಒಂದು ಮೇಕೆ (ಅಂದಾಜು ಮೊತ್ತ 6000 ರೂ.ಗಳು ದಿಂದ 8000ಸಾವಿರ) 20ಚಿಲ ಗೋಧಿ,4 ಚೀಲ ಜೋಳ,4ಚೀಲ ಸಜ್ಜೆ, 4 ಚೀಲ ಮೆಕ್ಕೆಜೋಳ,2 ಚೀಲ ಗೋಧಿ,4 ತೊಲೆ ಬಂಗಾರ, 5 ಲಕ್ಷರೂ.ಗಳು ನಗದು, ಬಟ್ಟೆಗಳು ರೈತಾಪಿ ಸಲಕರಣೆಗಳು,ಹೀಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಪ್ರಭಾವತಿ ಜಾಧವ ಅವರ ಹೇಳಿಕೆಯಾಗಿದೆ. ಘಟನೆಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ ಶೆಡ್ಡಿಗೆ ಬೆಂಕಿ ತಗುಲಿದ್ದು ಸಂಶಯಾಸ್ಪದವಾಗಿದೆ ಎಂದು ಜಮೀನು ರೈತ ಮಹಿಳೆಯಾದ ಪ್ರಭಾವತಿ ಗಂ-ಸಿದ್ಧಾರಾಮ ಜಾಧವ ಅವರ ಹೇಳಿಕೆಯಾಗಿದೆ. ಕಾರಣ ಸರ್ಕಾರವು ನಮಗಾದ ನಷ್ಟವನ್ನು ಭರಿಸಿದರೆ ಉತ್ತಮವಾಗತ್ತದೆ ಎಂದು ತಮ್ಮ ರೋಧನವನ್ನು ಹೇಳಿದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.ಹಾಗೂ ಪಶು ಆಸ್ಪತ್ರೆಯ ಅಧಿಕಾರಿಗಳಾದ ಲಕ್ಷ್ಮೀಕಾಂತ ಕಟ್ಟಿಮನಿ ಅವರ ಸಿಬ್ಬಂದಿಗಳು ಆಗಮಿಸಿ ಮೇಕೆ ಸಾವನ್ನಪ್ಪಿದ ಬಗ್ಗೆ ಮಾಹಿತಿ ಪಡೆದರು. ಗ್ರಾಮಲೆಕ್ಕಾಧಿಕಾರಿಗಳ ಸಹಾಯಕರು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಪುನಿತಗೌಡ ಧ ಅವಜಿ ಆಗಮಿಸಿ ಶೆಡ್ಡು ಸುಟ್ಟ ಬಗ್ಗೆ ಪಂಚನಾಮೆ ಮಾಡಿಕೊಂಡರು

ಈ ಘಟನೆಯು ಇಂಡಿ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.