ಪತ್ರಕರ್ತ, ಸಾಹಿತಿ ಬೆಳಗೆರೆ ಯುಗ ಅಂತ್ಯ : ವಿಷಾದ

ಲಿಂಗಸುಗೂರು.೧೩- ಮಾಧ್ಯಮ, ಸಾಹಿತ್ಯ, ಶಿಕ್ಷಣ, ನಾಟಕ, ಸಿನೆಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ಯುವಕರಿಗೆ ಪ್ರೇರಣಾತ್ಮಕ ಶಕ್ತಿಯಾಗಿದ್ದ ಹಿರಿಯ ಪತ್ರಕರ್ತ ರವಿಬೆಳೆಗೆಯವರ ಅಗಲಿಕೆ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ಉಮಾಮಹೇಶ್ವರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವಿನಯಕುಮಾರ ಗಣಾಚಾರಿ ವಿಷಾದ ವ್ಯಕ್ತಪಡಿಸಿದರು.
ತಮ್ಮ ಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಂದಿನಿಂದ ಬೆಳಗೆರೆಯವರ ಹಾಯ್ ಬೆಂಗಳೂರು ವಾರಪತ್ರಿಕೆಯನ್ನು ಓದುತ್ತಲೇ ಬೆಳೆದ ನಾವುಗಳು, ಅವರು ಬರೆದಿರುವ ಮಾಂಡೋವಿ, ಹೇಳಿ ಹೋಗು ಕಾರಣ, ಗಾಡ್ ಫಾದರ್, ಹಿಮಾಲಯನ್ ಬ್ಲಂಡರ್‍ಸ್, ಹಿಮಾಗ್ನಿ, ಇಂದಿರೆಯ ಮಗ ಸಂಜಯ, ಅನಿಲ್‌ಲಾಡ್ ಮತ್ತು ನಲವತ್ತು ಕಳ್ಳರು, ಪಾಪಿಗಳ ಲೋಕದಲ್ಲಿ, ಭೀಮಾ ತೀರದ ಹಂತಕರು, ನೀನಾ ಪಾಕಿಸ್ತಾನ, ಮುಸ್ಲಿಂ, ಖಾಸ್‌ಬಾತ್, ಕಾಮರಾಜ ಮಾರ್ಗ, ಸರ್ಪ ಸಂಬಂಧ, ಮಾಟಗಾತಿ, ನೀ ಹಿಂಗ ನೋಡಬ್ಯಾಡ ನನ್ನ, ರಾಜ ರಹಸ್ಯ, ರಾಜ್ ಲೀಲಾ ವಿನೋದ್ ಸೇರಿ ೫೦ಕ್ಕೂ ಹೆಚ್ಚು ಕೃತಿಗಳನ್ನು ಅಕ್ಷರ ಲೋಕಕ್ಕೆ ಕೊಡುಗೆಯಾಗಿ ನೀಡಿ, ಯುವಕರನ್ನು ಸಾಹಿತ್ಯದೆಡೆಗೆ ಸೆಳೆದ ಅಕ್ಷರ ಮಾಂತ್ರಿಕ ರವಿ ಬೆಳಗೆರೆಯವರ ಅಗಲಿಕೆ ಸಾಹಿತ್ಯ, ಮಾಧ್ಯಮ ಲೋಕಕ್ಕೆ ತುಂಬದ ನಷ್ಟವಾಗಿದೆ. ದೇವರು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ ನೀಡಲೆಂದು ಪ್ರಾರ್ಥಿಸಿದ ವಿನಯ್, ಇಂಥಹ ಸಕಲಕಲಾ ವಲ್ಲಭನ ಅಗಲಿಕೆ ತೀವ್ರ ಆಘಾತ ತಂದಿದೆ ಎಂದು ಗದ್ಗತಿರದಾರು.
ಮಾಧ್ಯಮ ರಂಗಕ್ಕೆ ಕಾಲಿಡುವ ಯುವಕರಿಗೆ ಪ್ರೇರಣೆಯಾಗಿದ್ದ ರವಿಬೆಳಗೆರೆಯವರ ಅಗಲಿಕೆ ಅರಗಿಸಿಕೊಳ್ಳಲಿಕ್ಕಾಗದ ನೋವನ್ನುಂಟು ಮಾಡಿದೆ. ಜಾತ್ಯಾತೀತ ಮನೋಭಾವನೆ ಹೊಂದಿದ್ದ ಬೆಳಗೆರೆಯವರ ಶಾಲೆಯ ಅರ್ಜಿ ಫಾರಂನಲ್ಲಿ ಜಾತಿಯ ಕಾಲಂ ಇಲ್ಲದೇ ಇರುವುದು ಅವರ ಮೇರು ವ್ಯಕ್ತಿತ್ವವನ್ನು ಪರಿಚಯಿಸುತ್ತದೆ ಎಂದು ವಿನಯಕುಮಾರ ಬೆಳಗೆರೆಯವರ ಬಗ್ಗೆ ಮಾತನಾಡಿದರು.