ಪತ್ರಕರ್ತ ಶಿವಪುತ್ರ ದನಶೆಟ್ಟಿಗೆ ಉತ್ತಮ ಪ್ರಶಸ್ತಿ ಪ್ರದಾನ

ಸಿಂಧನೂರು,ಜು.೩೧-
ಉತ್ತಮ ಜಿಲ್ಲಾ ಪ್ರಶಸ್ತಿ ಪಡೆದ ಪತ್ರಕರ್ತ ಶಿವಪುತ್ರ ದನಶೆಟ್ಟಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ತಾಲೂಕಾ ವರದಿಗಾರರಾದ ಶಿವಪುತ್ರ ದನಶೆಟ್ಟೆಗೆ ಉತ್ತಮ ಪತ್ರಕರ್ತ ಪ್ರಶಸ್ತಿ ನೀಡಿ ಜಿಲ್ಲಾ ಉಸ್ತುವಾರಿ ಹಾಗು ವೈದ್ಯಕೀಯ ಸಚಿವರಾದ ಡಾ.ಶರಣ ಪ್ರಕಾರ ಪಾಟೀಲ ಸನ್ಮಾನಿಸಿದರು.
ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಭೋಸರಾಜ ಜಿಲ್ಲೆಯ ಶಾಸಕರಾದ ಹಂಪನಗೌಡ ಬಾದರ್ಲಿ, ಡಾ.ಶಿವರಾಜ ಪಾಟೀಲ, ಬಸನಗೌಡ ದದ್ಧಲ್ ಕರೆಮ್ಮ ನಾಯಕ, ಹಂಪಯ್ಯ ನಾಯಕ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ನಿಖಿಲ್, ಬಿ.ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರಾದ ಗುರುನಾಥ ಕಾರ್ಯದರ್ಶಿ, ಪಾಷಾ, ಪತ್ರಕರ್ತರಾದ ಚೆನ್ನಬಸವಣ್ಣ, ವಿಜಯ ಜಾಗಟಗಲ್, ಕೆ. ಸತ್ಯನಾರಾಯಣ, ದತ್ತು ಸರ್ಕಲ್, ಶಿವಮೂರ್ತಿ ಹಿರೇಮಠ ಸೇರಿದಂತೆ ಇತರರು ವೇದಿಕೆಯ ಮೇಲೆ ಇದ್ದರು.
ಸಿಂಧನೂರು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಹೆಚ್ ಕಂಬಳಿ ಕಾರ್ಯದರ್ಶಿ ಶರಣೆಗೌಡ, ಪತ್ರಕರ್ತರಾದ ಶ್ಯಾಮ ಕುಮಾರ ಚಿದಾನಂದ ದೊರೆ, ಯಮನಪ್ಪ ಪವಾರ, ಪ್ರಹ್ಲಾದ ಗುಡಿ ಅಶೋಕ, ಚಂದ್ರಶೇಖರ, ಶಿವಪುತ್ರ ದನಶೆಟ್ಟಿ, ಅಮರೇಶ ಅಲಬನೂರು, ಶರಣಪ್ಪ ಬೇರಿಗಿ, ಚಂದ್ರಶೇಖರ, ಯರದಿಹಾಳ ಬೀರಪ್ಪ ರಾಘವೇಂದ್ರ ಚನ್ನಬಸವ ಸೇರಿದಂತೆ ಇನ್ನಿತರ ಪತ್ರಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.