ಪತ್ರಕರ್ತ ರೋಹಿತ್ ಕೊರೊನಾಗೆ ಬಲಿ: ಮೋದಿ ಸಂತಾಪ

ನವದೆಹಲಿ, ಏ 30- ಆಜ್‌ತಕ್ ವಾಹಿನಿಯ ಪತ್ರಕರ್ತ ಮತ್ತು ಹಿರಿಯ ನಿರೂಪಕ ರೋಹಿತ್ ಸರ್ದಾನರವರು ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ರೋಹಿತ್ ಸರ್ದಾನ ಅವರು ಆಜ್‍ತಕ್ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಜನಪ್ರಿಯ ಕಾರ್ಯಕ್ರಮ ‘ದಂಗಲ್’ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಸಕ್ತ ವ್ಯವಹಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಈ ಮುನ್ನ ಜೀ ನ್ಯೂಸ್‍ನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಕೂಡ ಚರ್ಚಾ ಆಧಾರಿತ ‘ತಾಲ್ ಥೋಕ್ ಕೆ’ ಎಂಬ ಕಾರ್ಯಕ್ರಮಕದ ನಿರೂಪಕರಾಗಿದ್ದರು.

ರೋಹಿತ್ ಸರ್ದಾನಾ ಅವರಿಗೆ ಸರ್ಕಾರವು 2018ರಲ್ಲಿ ‘ಗಣೇಶ ಶಂಕರ್ ವಿದ್ಯಾರ್ಥ’ ಪುರಸ್ಕರ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ರೋಹಿತ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ ಬಹು ಬೇಗ ನಮ್ಮನ್ನು ಅಗಲಿದ್ದಾರೆ. ಭಾರತದ ಅಭಿವೃದ್ದಿ ಕುರಿತಂತೆ ಬಹಳ ಉತ್ಸಾಹ ಹೊಂದಿದ್ದರು. ಹೃದಯ ವಂತರು. ಅವರ ಅಕಾಲಿಕ ಮರಣವು ಮಾಧ್ಯಮ ಜಗತ್ತಿಗೆ ತುಂಬಾಲಾರದ ನಷ್ಟವನ್ನುಂಟು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.