ಪತ್ರಕರ್ತ ರವಿಬಾಬು ತಾಯಿ ನಿಧನ

ದಾವಣಗೆರೆ.ಮೇ.೨೦; ನಗರದ ನಿವಾಸಿ ನಾರಾಯಣಮ್ಮ (೮೯ವರ್ಷ) ಅವರು ಬುಧವಾರ ಮಧ್ಯಾಹ್ನ  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲದಿನಗಳಿಂದ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದರು. ಮೃತರಿಗೆ ಪತ್ರಕರ್ತ ರವಿಬಾಬು ಸೇರಿದಂತೆ ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವಿದೆ. ನಾರಾಯಣಮ್ಮ  ಅವರ ನಿಧನಕ್ಕೆ  ಗಣ್ಯರು, ಪತ್ರಕರ್ತರು, ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.