ಪತ್ರಕರ್ತ ಮಣ್ಣೂರ ನಿಧನಕ್ಕೆ ಶಾಸಕ ಅಲ್ಲಂಪ್ರಭು ಕಂಬನಿ

ಕಲಬುರಗಿ:ಅ.13:ಹಿರಿಯ ಪತ್ರಕರ್ತ ಹಾಗೂ ಸತ್ಯಾಕಾಮ ದಿನಪತ್ರಿಕೆ ಸಂಪಾದಕರಾದ ಪಿ.ಎಂ. ಮಣ್ಣೂರ ನಿಧನಕ್ಕೆ ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಕಂಬನಿ ಮಿಡಿದಿದ್ದಾರೆ.

ಅವರ ಆಗಲಿಕೆ ಕಲಬುರ್ಗಿ ಜಿಲ್ಲೆಯ ಪತ್ರಿಕಾ ರಂಗಕ್ಕೆ ತುಂಬಲಾಗದ ನಷ್ಟ .ಅವರೊಬ್ಬ ಸ್ನೇಹಜೀವಿಯಾಗಿದ್ದರು. ನಮ್ಮನ್ನಗಲಿದ್ದು ದುಃಖದ ಸಂಗತಿ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಅಲ್ಲಮಪ್ರಭು ಪಾಟೀಲ ಪ್ರಾರ್ಥಿಸಿದ್ದಾರೆ.