ಪತ್ರಕರ್ತ ಬೆಳ್ಳಗಟ್ಟೆ ಕೃಷ್ಣಪ್ಪ ನಿಧನ.

ಕೂಡ್ಲಿಗಿ.ಸೆ.4 :-   ತಾಲೂಕಿನ ಹಿರಿಯ ಪತ್ರಕರ್ತ ಹಾಗೂ  ವಾರಪತ್ರಿಕೆಯ ಸಂಪಾದಕರಾದ ಬೆಳಗಟ್ಟೆ ಕೃಷ್ಣಪ್ಪ (52) ಬಹುದಿನಗಳಿಂದ ತೀವ್ರ ಅನಾರೋಗ್ಯ ಪೀಡಿತರಾಗಿ ಬಳಲುತ್ತಿದ್ದು ಇಂದು ನಸುಕಿನ ಜಾವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.                                                                                             
ಅವರು ಹಲವಾರು ವರ್ಷಗಳಿಂದ ಬಯಲುಸೀಮೆ ಎಂಬ ವಾರಪತ್ರಿಕೆ ಸಂಪಾದಕರಾಗಿದ್ದರು
ಅವರು ಪತ್ನಿ,ಪುತ್ರ ಮತ್ತು ಪುತ್ರಿ ಹಾಗೂ  ಅಪಾರ ಬಂಧು ಬಳಗವನ್ನು, ಪತ್ರಕರ್ತ ಮಿತ್ರರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬೆಳಗಟ್ಟೆ ಗ್ರಾಮದ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ :-  ಮೃತರ ಆತ್ಮಕ್ಕೆ ಕೂಡ್ಲಿಗಿ ತಾಲೂಕಿನ  ಪತ್ರಕರ್ತರು, ಗಣ್ಯರು, ಮುಖಂಡರು ಇತರರು ಸಂತಾಪ ಸೂಚಿಸಿದ್ದಾರೆ.