
ಬೀದರ್: ನ.3:ಪತ್ರಕರ್ತ ಪ್ರದೀಪ ಬಿರಾದಾರ ಅವರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಹಯೋಗದಲ್ಲಿ ಬುಧವಾರ ನಗರದ ನೆಹರು ಕ್ರೀಡಾಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಗೌರವ ಸನ್ಮಾನ ಮಾಡಲಾಗಿತ್ತು.
ಸನ್ಮಾನಕ್ಕೆ ಭಾಜನಾರದ ಬಿರಾದಾರ ಅವರನ್ನು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಕರ್ನಟಕ ಕಾರ್ಯನಿರತ ಪತ್ರಕರ್ತರ ಸಮಘದ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.
ಸನ್ಮಾನ ಮಾಡಿ ಮಾತನಾಡಿದ ಸಮಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಅವರು, ಪ್ರದೀಪ ಅವರು ಮೂಲತಃ ಮರಾಠಿ ಭಾಷಿಕರಾಗಿದ್ದರೂ ದೂರದೃಷ್ಟಿ ಎಂಬ ಕನ್ನಡ ದಿನಪತ್ರಿಕೆ ಹುಟ್ಟು ಹಾಕಿ ಎಂಟು ವರ್ಷ ಗತಿಸಿದೆ. ಗಡಿ ಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವಲ್ಲಿ ತನ್ನದೇ ಕೊಡುಗೆ ನೀಡಿರುವ ಪ್ರದೀಪ ಅವರಿಗೆ ಜಿಲ್ಲಾಡಳಿತ ಗುರುತಿಸಿ ಸನ್ಮಾನಿಸಿರುವುದು, ಅದಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೆಸರು ಸೂಚಿಸಿರುವುದಕ್ಕೆ ಹೆಮ್ಮೆ ಇದೆ ಎಂದರು.
ಸಮಾರಂಭದಲ್ಲಿ ಸಂಘದ ವತಿಯಿಂದ ಶಾಲು ಹೊದಿಸಿ, ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಶುಭಾಷಯ ಕೋರಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ಕಾರ್ಯದರ್ಶಿ ಪ್ರಥ್ವಿರಾಜ.ಎಸ್, ಖಜಾಂಚಿ ಎಂ.ಪಿ ಮುದಾಳೆ, ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಸಂತೋಷ ಚಟ್ಟಿ, ಪತ್ರಕರ್ತರಾದ ಲಿಂಗೇಶ ಮರಕಲೆ, ಸುನಿಲ ಬಾವಿಕಟ್ಟಿ, ಜೈಕುಮಾರ, ಸುಧಾರಾಣಿ, ಯಾದವ ಘೋಡಕೆ, ರಾಮಚಂದ್ರ ಕೊಂಡಾ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.