ಪತ್ರಕರ್ತ ದೇವರಾಜನಾಯ್ಡುಗೆ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ

ಚಾಮರಾಜನಗರ, ಮಾ.31- ಸಮಾಜದ ಅಂಕುಡೊಂಕನ್ನು ತಿದ್ದುವ ಪತ್ರಕರ್ತರು ಓದುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು ಎಂದು ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠ ಪ್ರಕಟಣಾ ವಿಭಾಗದ ಗೌರವ ಸಂಪಾದಕರಾದ ಆರ್.ಎಸ್. ಪೂರ್ಣಾನಂದಾ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಫ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹನೂರು ತಾಲೂಕಿನ ಕನ್ನಡಪ್ರಭ ವರದಿಗಾರ ಜಿ. ದೇವರಾಜ ನಾಯ್ಡು ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು, ಎಲ್ಲ ವಿಷಯಗಳ ಬಗ್ಗೆ ಕನಿಷ್ಠ ಜ್ಞಾನವನ್ನು ಹೊಂದಿರಬೇಕು ಇದಕ್ಕಾಗಿ ಓದುವ ಹವ್ಯಾಸ ಹಾಗೂ ಅಧ್ಯಯನ ಪತ್ರಕರ್ತರಿಗೆ ಅಗತ್ಯವಾಗಿದೆ. ಉರಿವ ಹಣತೆಯಂತೆ ಪತ್ರಕರ್ತರು ಸಮಾಜಕ್ಕೆ ಬೆಳಕು ನೀಡಬೇಕು ಎಂದರಲ್ಲದೆ ಪತ್ರಿಕಾ ಮಾಧ್ಯಮ ಮಿತ್ರರು ನಿμÉ್ಠ, ವಿನಯ, ನಡೆತೆ ಹೊಂದಿರಬೇಕು ಎಂದು ಸಲಹೆ ನೀಡಿದರು.
ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠ ಲೆಕ್ಕ ಪರಿಶೋಧನಾ ನಿರ್ದೇಶಕರಾದ ಕೆ.ಎಸ್ ಸಂತಾನಂ ಮಾತನಾಡಿ, ಕೋಮ ಸಂಘರ್ಷ ಹಾಗೂ ಸೂಕ್ಷ್ಮ ಘಟನೆಗಳ ಬಗ್ಗೆ ವರದಿ ಮಾಡುವಾಗ ಪತ್ರಕರ್ತರು ಅದರ ಸೂಕ್ಷ್ಮತೆಯನ್ನು ಅರಿಯಬೇಕಾಗಿದ್ದು, ಸಮಾಜದ ಸಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದು ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಮಾಧ್ಯಮವು ನಾಲ್ಕನೇ ಅಂಗವಾಗಿ ಸರ್ಕಾರ ಹಾಗೂ ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಣ್ಣಿಸಿದರು.
ಕತ್ತಿಗಿಂತ ಲೇಖನಿಯ ಸಾಮಥ್ರ್ಯ ಹೆಚ್ಚಿದ್ದು ಅಂಜಿಕೆ ಇಲ್ಲದೆ ಪ್ರಶ್ನಿಸುವ ಎದೆಗಾರಿಕೆಯನ್ನು ಪತ್ರಕರ್ತರು ಹೊಂದಿದ್ದಾರೆ ಹೀಗಾಗಿಯೇ ವರದಿಗಳ ಮೂಲಕ ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಪತ್ರಕರ್ತರು ಕೆಲಸ ಮಾಡಲಾಗುತ್ತಿದ್ದು ಮಹತ್ವವನ್ನು ಪಡೆದುಕೊಂಡಿದೆ. ಗ್ರಾಮೀಣ ಭಾಗಕ್ಕೆ ಉತ್ತಮ ಯೋಜನೆಗಳನ್ನು ತರುವ ಕೆಲಸ ಆಗಬೇಕು ಇದರ ಕಡೆ ಪತ್ರಕರ್ತರ ಗಮನ ಹರಿಸಿ ಸಹಕಾರಿಯಾಗಬೇಕು ಎಂದು ಸಲಹೆ ನೀಡಿದರು.
ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೇವರಾಜ ಕಪ್ಪಸೋಗೆ ಮಾತನಾಡಿ, ಜೆಎಸ್‍ಎಸ್ ಸಂಸ್ಥೆಯಿಂದ ಶ್ರೀ ಶಿವರಾತ್ರೇಶ್ವರ ಮಾಧ್ಯಮ ಪ್ರಶಸ್ತಿಯನ್ನು 2011 ರಿಂದ ನೀಡುತ್ತಾ ಬಂದಿದೆ. ಕ್ರಿಯಾ ಶೀಲ ಪತ್ರಕರ್ತರನ್ನು ಸನ್ಮಾನಿಸಿ ಪೆÇ್ರೀತ್ಸಾಹ ನೀಡುತ್ತಿರುವುದು ಸಂತಸದ ವಿಷಯ. ಮುಂದಿನ ವರ್ಷಗಳಲ್ಲಿ ಎರಡು ವರ್ಷಕ್ಕೊಮ್ಮೆ ನೀಡುವ ಬದಲು ಪ್ರತಿ ವರ್ಷ ಪ್ರಶಸ್ತಿಯನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ತಲಾ ಒಬ್ಬರಿಗೆ ನೀಡಿ ಪೆÇ್ರೀತ್ಸಾಹಿಸಬೇಕು. ಇದರಿಂದ ಸಮಾಜದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಪೆÇ್ರತ್ಸಾಹ ದೊರಕುತ್ತದೆ ಎಂದು ತಿಳಿಸಿದರು.
ಜೆಎಸ್‍ಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಜಿ. ಸಿದ್ದರಾಜು ಮಾತನಾಡಿ, ಪ್ರತಿಯೊಂದು ವೃತ್ತಿಯಲ್ಲೂ ಭದ್ರತೆ ಇರುತ್ತದೆ. ಆದರೆ, ಪತ್ರಕರ್ತರರಿಗೆ ಯಾವುದೇ ವೃತ್ತಿ ಭದ್ರತೆ ಇರುವುದಿಲ್ಲ. ಜೊತೆಗೆ ಹೆಚ್ಚಿನ ಸಮಯ ದುಡಿಯಬೇಕು. ಇಂತಹ ಕ್ಷೇತ್ರದಲ್ಲಿ ದುಡಿಯುತ್ತಿರುವ ಪತ್ರಕರ್ತರನ್ನು ಸಮಾಜ ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ ಎಂದರು.
ಪತ್ರಕರ್ತ ನಿಂಪುರಾಜೇಶ್ ನಿರೂಪಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್ ವಂದಿಸಿದರು.