ಪತ್ರಕರ್ತ ತೇ.ಸಿ.ವಿಶ್ವೇಶ್ವರಯ್ಯ ನಿಧನ

ಮೈಸೂರು, ನ.21: ಮೈಸೂರು; ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ನಿವೃತ್ತರಾಗಿದ್ದ, ಪತ್ರಕರ್ತ ತೇ.ಸಿ.ವಿಶ್ವೇಶ್ವರಯ್ಯ (66) ಶನಿವಾರ ಬೆಳಗಿನ ಜಾವ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ತೇಜೂರು ಗ್ರಾಮದ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಮೈಸೂರು ಗ್ರಾಮಾಂತರ ಕ್ಷೇತ್ರದ ಶಾಲಾ ತನಿಖಾಧಿಕಾರಿಗಳಾಗಿ ನಂತರ
ನಗರದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾಯ9ಕ್ರಮ ಸಂಯೋಜಕರಾಗಿ ನಿವೃತ್ತರಾಗಿದ್ದರು.
ಕೆ.ಆರ್.ನಗರದ ಪ್ರಜಾವಾಣಿಯ ಅರೆಕಾಲಿಕ ವರದಿಗಾರರಾಗಿಯೂ ಕಾಯ9 ನಿರ್ವಹಿಸಿದ್ದರು.
ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕೆ.ಆರ್.ನಗರದ ಬಸವ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಬಯಲು ಬೆಳಗು, ಶಿಕ್ಷಣ ದರ್ಶಿನಿ, ಎಸ್.ನಿಜಲಿಂಗಪ್ಪ ಕುರಿತು
ಸೇರಿದಂತೆ ಐದಾರು ಕೃತಿಗಳನ್ನು ರಚಿಸಿದ್ದರು.
ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತೇಜೂರಲ್ಲಿ ಶನಿವಾರ ನಡೆಯಿತು.