ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ತಹಸಿಲ್ದಾರರಿಗೆ ಮನವಿ

ಶಹಾಪುರ:ನ.8:ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವೆನಿಸಿದ, ಪತ್ರಿಕಾ ರಂಗದ ಸ್ವಾತಂತ್ರ್ಯವನ್ನು ಹರಣ ಮಾಡಿದ ಮಾಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ಉದ್ಬವ ಟಾಕ್ರೆಯವರ ಕ್ರಮ ವಿರೋಧಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಶಹಾಪುರ ತಹಸಿಲ್ದಾರವರಿಗೆ ಮನವಿ ಪತ್ರ ಸಲ್ಲಿಸುವದರ ಮುಖಾಂತರ ಪ್ರತಿಭಟಿಸಿದರು.

ಪತ್ರಿಕಾ ಸ್ವಾತಂತ್ರ್ಯವನ್ನೆ ಕಗ್ಗೊಲೆ ಮಾಡಿದ ಮುಖ್ಯಮಂತ್ರಿ ಉದ್ಬವ ಟಾಕ್ರೆಯವರು ಸುಳ್ಳು ಆರೋಪಗಳನ್ನು ಸೃಷ್ಟಿಕೊಂಡು ಗೋಸ್ವಾಮಿಯವರನ್ನು ಬಂಧಿಸಿದ್ದಾರೆ. ಮಾಹಾರಾಷ್ಟ್ರದ ಅಪವಿತ್ರ ಮೈತ್ರಿಯ ಸರ್ಕಾರ ಅಮಾನವಿಯ ಕಾರ್ಯಗಳಿಗೆ ಮುಂದಾಗಿರುವದು ಶೋಚನೀಯ ಸಂಗತಿಯಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದರು. ತಹಸಿಲ್ದಾರ ಜಗನಾಥರಡ್ಡಿಯರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಯಾದಗಿರಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗುರು ಕಾಮಾ, ಬಿಜೆಪಿ ತಾಲೂಕು ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ, ನಗರ ಘಟಕದ ಅಧ್ಯಕ್ಷರಾದ ದೇವು ಕೊನೇರ, ಶ್ರೀಕಾಂತ ಸುಬೇದಾರ ಯಾದಗಿರಿ ಜಿಲ್ಲಾ ಯುವ ಘಟಕದ ಕಾರ್ಯದರ್ಶಿಗಳಾದ ಶ್ರೀನಿವಾಸನಾಯಕ ವನದುರ್ಗಾ, ಬಸವರಾಜ ರತ್ತಾಳ, ನಗರ ಯುವ ಮೊರ್ಚಾ ಅಧ್ಯಕ್ಷರಾದ ರಾಜು ಪಂಚಬಾವಿ, ಭೀಮಣ್ಣ ಕೊಲಕರ್, ವಿರೇಶ ಅಡಕಿ, ಬಸ್ಸುಗೌಡ ರಾಜಾಪುರ, ಸುಶೀಲಕುಮಾರ ಕರಿಬಸ್ಸಪ್ಪ ಬಿರಾಳ, ಅಬ್ದುಲ ಹಾದಿಮನಿ, ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.