ಪತ್ರಕರ್ತರ ಸಮ್ಮೇಳನದ ಯಶಸ್ವಿಗೆ ಒಗ್ಗೂಡಿ ಕೆಲಸ ಮಾಡಿ

ವಿಜಯಪುರ:ನ.8: ಪತ್ರಕರ್ತರ 37 ನೇ ರಾಜ್ಯ ಸಮ್ಮೇಳನ ವಿಜಯಪುರದಲ್ಲಿ ನಡೆಸಲು ಅವಕಾಶ ದೊರೆತಿದ್ದು ಹೆಮ್ಮೆಯ ವಿಷಯ. ಜಿಲ್ಲೆಯ ಎಲ್ಲ ಪತ್ರಕರ್ತರು ಒಗ್ಗೂಡಿ ಈ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಕಾನಿಪ ಸಂಘದ ಸಲಹಾ ಸಮಿತಿ ಸದಸ್ಯ ಗೋಪಾಲ ನಾಯಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಕರ್ತರ 37ನೇ ರಾಜ್ಯ ಸಮ್ಮೆಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮ್ಮೇಳನದ ಸಿದ್ಧತೆಗೆ ರಚಿಸಲಾದ ನಾನಾ ಸಮಿತಿಗಳ ಸದಸ್ಯರು ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇಂದಿನಿಂದಲೇ ಎಲ್ಲರೂ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಬೇಕು ಎಂದರು. ತಮ್ಮ ದೈನಂದಿನ ಕೆಲಸದ ಜೊತೆಗೆ ಸಮ್ಮೇಳನದ ಕೆಲಸಕ್ಕೂ ತಮ್ಮ ಸಮಯ, ಶಕ್ತಿಯನ್ನು ವಿನಿಯೋಗಿಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ಮುದ್ರಣ ಹಾಗೂ ದೃಶ್ಯ ಮಾಧ್ಯಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲ ಪತ್ರಕರ್ತರು ಒಮ್ಮನಸ್ಸಿನಿಂದ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿ ಸಮ್ಮೇಳನ ಯಶಸ್ವಿಗೊಳಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನ ನಮ್ಮ ಮನೆಯ ಕಾರ್ಯಕ್ರಮ, ನಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆ ಎಂಬ ಭಾವದೊಂದಿಗೆ ಸಮ್ಮೇಳನದ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಲ್ಲರೂ ಆರಂ’ದಿಂದ ಕೊನೆಯವರೆಗೂ ಉತ್ಸಾಹದಿಂದ, ಪರಸ್ಪರ ಸಹಕಾರ ಹಾಗೂ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗುತ್ತದೆ ಎಂದರು.

ಸಮ್ಮೇಳನದ ಯಶಸ್ವಿಗಾಗಿ ಹಣಕಾಸು ಸಮಿತಿ, ವಸತಿ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ಸಾರಿಗೆ ಸಮಿತಿ, ವೇದಿಕೆ ಸಮಿತಿ, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿ, ಸ್ಮರಣ ಸಂಚಿಕೆ ಸಮಿತಿ ಮತ್ತಿತರೆ ಸಮಿತಿಗಳನ್ನು ರಚಿಸಲಾಯಿತು.

ಸಮ್ಮೇಳನದ ಸ್ಥಳ ಆಯ್ಕೆ, ದಿನಾಂಕ ನಿಗದಿ, ಅನುದಾನ ಕ್ರೋಢೀಕರಿಸುವುದು ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸಂಘದ ಪದಾಕಾರಿಗಳಾದ ಫಿರೋಜ್ ರೋಜಿನದಾರ, ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಕೆ.ಕೆ.ಕುಲಕರ್ಣಿ, ಮೋಹನ ಕುಲಕರ್ಣಿ, ರಾಹುಲ ಆಪ್ಟೆ, ಡಿ.ಬಿ.ವಡವಡಗಿ, ಸದಸ್ಯರಾದ ಜಿ.ಎಸ್.ಕಮತರ, ಸುಶೀಲೇಂದ್ರ ನಾಯಕ, ಮಹೇಶ ಶೆಟಗಾರ, ಶರಣು ಮಸಳಿ, ಬಸವರಾಜ ಉಳ್ಳಾಗಡ್ಡಿ, ಸುನೀಲ ಕಾಂಬಳೆ, ಅರವಿಂದ ಖಡೆಖಡೆ, ಮಲ್ಲಿಕಾರ್ಜುನ ತೊರಗಲ್ಲಮಠ, ಬಾಬು ವಾಡೇದ, ಸೀತಾರಾಮ ಕುಲಕರ್ಣಿ, ಅಶೋಕ ಯಡಳ್ಳಿ, ರಾಜು ಕೊಂಡಗೂಳಿ, ಗುರು ಗದ್ದನಕೇರಿ, ದೇವೇಂದ್ರ ಹೆಳವರ, ಶಶಿ ಮೆಂಡೇಗಾರ, ವಿಜಯ್ ಸಾರವಾಡ, ????ನ್ ಶೇಖ, ಟಿ.ಕೆ.ಮಲಗೊಂಡ, ಸಚೇಂದ್ರ ಲಂಬು, ಮೊಹ್ಮದಸಮೀರ ಇನಾಮದಾರ, ಅರವಿಂದ ಬಿರಾದಾರ ಮತ್ತಿತರರಿದ್ದರು.

ಇದೇ ಸಂದ’ರ್ದಲ್ಲಿ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶೆಟಗಾರ ಅವರನ್ನು ಕಾನಿಪ ಸಂಘದಿಂದ ಸ್ವಾಗತಿಸಿ, ಸನ್ಮಾನಿಸಲಾಯಿತು.

ಖಾಸಗಿ ವಾಹಿನಿಗೆ ಶುಭಹಾರೈಕೆ :

ಇದಕ್ಕೂ ಮೊದಲು ಇದೇ ದಿನ ಲೋಕಾರ್ಪಣೆಗೊಂಡ ಖಾಸಗಿ ವಾಹಿನಿಯ ತಂಡಕ್ಕೆ ಶು’ ಕೋರಲಾಯಿತು. ಕೇಕ್ ಕಟ್ ಮಾಡುವ ಮೂಲಕ ಖಾಸಗಿ ವಾಹಿನಿಗೆ ಶುಭ ಹಾರೈಸಲಾಯಿತು. ಈ ವಾಹಿನಿಯ ಜಿಲ್ಲಾ ವರದಿಗಾರ ರಾಜು ಪಾಟೀಲ, ಕೆಮೆರಾಮನ್ ಭೀಮು ಕುಂಟೋಜಿ ಅವರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.