ಪತ್ರಕರ್ತರ ಸಂಘಕ್ಕೆ ಮೂರು ಗುಂಟೆ ಜಮೀನು ಮೀಸಲು

ಕೋಲಾರ,ಜು.೨೫: ಮುಳಬಾಗಿಲಿನಲ್ಲಿ ಕೆರಾ ಸಂಘದ ಪತ್ರಕರ್ತರ ಭವನಕ್ಕಾಗಿ ಮೂರು ಗುಂಟೆ ಜಮೀನು ಮೀಸಲಿಟ್ಟಿದ್ದು, ಶೀಘ್ರದಲ್ಲೇ ಪತ್ರಿಕಾ ಭವನವನ್ನು ನಿರ್ಮಿಸಿ ಪತ್ರಕರ್ತರಿಗೆ ನೀಡುವುದಾಗಿ ಮುಳಬಾಗಿಲು ಶಾಸಕರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಹೆಚ್.ನಾಗೇಶ್ ತಿಳಿಸಿದರು.
ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ವತಿಯಿಂದ ೪ನೇ ವರ್ಷದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಕಳೆದ ನಾಲ್ಕು ವರ್ಷಗಳಿಂದ ಕೆರಾ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಪತ್ರಕರ್ತರ ಏಳಿಗೆಗಾಗಿ ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಶ್ರಮಿಸುವುದಾಗಿ ತಿಳಿಸಿದ ಅವರು. ವಿವಿಧ ಕ್ಷೇತ್ರದಲ್ಲಿ ಸಾಧರನ್ನು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪರ್ತಕರ್ತರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ ತಾಲ್ಲೂಕಿನಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಪತ್ರಕರ್ತರು ಅತಿ ಹೆಚ್ಚಿನ ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡುವುದರೊಂದಿಗೆ ಪ್ರಾಮಾಣಿಕರಾಗಿದ್ದಾರೆ ಅಂತಹ ಪ್ರಾಮಾಣಿಕ ಪತ್ರಕರ್ತರಿಗೆ ನನ್ನ ಸ್ವಂತ ಹಣದಿಂದ ಬಾಡಿಗೆ ಕಟ್ಟಿ ಉಚಿತವಾದ ಕಛೇರಿಯನ್ನು ನೀಡುತ್ತೇನೆಂದು ತಿಳಿಸಿದರು.
ಕೇರಾ ಸಂಘದ ಪತ್ರಕರ್ತರ ಕಛೇರಿಯ ಸ್ಥಳಕ್ಕಾಗಿ ನೀಡಿದ ಮನವಿಯ ಮೇರೆಗೆ ಈಗಾಗಲೇ ಕೆಲವೊಂದು ಪುರಸಭೆ ಕಟ್ಟಡಗಳನ್ನು ಗುರ್ತಿಸಿದ್ದೇನೆ. ಮುಂದಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೇರಾ ಸಂಘದವರೊಂದಿಗೆ ಚರ್ಚಿಸಿ ಅವರಿಗೆ ನಿವೇಶನ ಹಂಚುವಂತಹ ಕೆಲಸವನ್ನು ಮಾಡುತ್ತೇನೆ. ತಾತ್ಕಲಕವಾಗಿ ಖಾಲಿ ಇರುವ ಪರಸಭೆ ಕಟ್ಟಡಗಳನ್ನು ಗುರ್ತಿಸಿ ಅವರಿಗೆ ನೀಡುತ್ತೇನೆಂದು ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಕಛೇರಿ ನಿರ್ಮಿಸಿದಲ್ಲಿ ಶಾಸಕರ ನಿದಿಯಿಂದ ೫ ಲಕ್ಷ ರೂಗಳನ್ನು ನೀಡುತ್ತೇನೆಂದು ತಿಳಿಸಿದರು.
ಕೇರಾ ಮಾಲೂರು ತಾಲ್ಲೂಕು ಅಧ್ಯಕ್ಷ ಪಿ.ಎನ್.ದಾಸ್ ಪ್ರಾಸ್ತವಿಕ ನುಡಿಗಳನ್ನಾಡಿದರು. ರಾಜ್ಯಾಧ್ಯಕ್ಷರಾದ ಕಲಾವಿದ ವಿಷ್ಣು ಮತ್ತು ಜಿಲ್ಲಾಧ್ಯಕ್ಷರಾದ ಚೇತನ್ ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬು ಮತನಾಡಿದ ಸಂದರ್ಭದಲ್ಲಿ ಕೆರಾ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು, ವಿವಿಧ ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾ ನಿರೂಪಿಸಿ, ಕನ್ನಡಮಿತ್ರ ವೆಂಕಟಪ್ಪ ಸ್ವಾಗತಿಸಿ, ಆಲ್ಬರ್ಟ್ ಮನೋರಾಜ್ ವಂದಿಸಿದರು.