ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿ ಗಂಗಾಧರ್ ಆಯ್ಕೆ

ನಂಜನಗೂಡು: ಜೂ.03:- ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗಂಗಾಧರ್ ಮತ್ತು ರಂಗಸ್ವಾಮಿ ಸ್ಪರ್ಧಿಸಿದ್ದು ರಂಗಸ್ವಾಮಿ ವಿರುದ್ಧ ಗಂಗಾಧರ್ ನಾಲ್ಕು ಮತಗಳ ಅಂತರದಿಂದ ಜಯಗಳಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ
ವಿಜೇತ ನೂತನ ಅಧ್ಯಕ್ಷ ಮಾತನಾಡಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಸಂಘದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿ ತಮ್ಮನ್ನು ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು
ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರೂ ಉಪಾಧ್ಯಕ್ಷರಾಗಿ ಶ್ರೀ ರಾಘವೇಂದ್ರ ಪ್ರಧಾನ ಕಾರ್ಯದರ್ಶಿ ಎಂ ಎಸ್ ಸತ್ಯನಾರಾಯಣ ಖಜಾಂಜಿ ಎಸ್ ಮಾದೇವ ಕಾರ್ಯದರ್ಶಿ ಮಹದೇವಸ್ವಾಮಿ
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೋಹನ್ ವೇಣುಗೋಪಾಲ್ ಭಾಗ್ಯರಾಜ್ ದೀಪು ಚೆನ್ನಪ್ಪ ಬಸವರಾಜ್ ಚಿನ್ನಸ್ವಾಮಿ ಆಯ್ಕೆಯಾಗಿದ್ದಾರೆ
ಚುನಾವಣೆ ಅಧಿಕಾರಿಯಾಗಿ ಬನ್ನೂರು ಕೆ ರಾಜು ಕಾರ್ಯ ನಿರ್ವಹಿಸಿದರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ರಾಜ್ಯ ಸಮಿತಿ ಸದಸ್ಯರು ರಾಘವೇಂದ್ರ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ದೀಪಕ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀನಿವಾಸ್ ವಿಜೇತರಿಗೆ ಶುಭ ಹಾರೈಸಿದರು.