ಪತ್ರಕರ್ತರ ಶಕ್ತಿ ಎಂದರೆ ಬರವಣಿಗೆ: ತಗಡೂರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.28: ಪತ್ರಕರ್ತರ ಶಕ್ತಿ ಎಂದರೆ ಬರವಣಿಗೆ, ಬರವಣಿಗೆ ಮೂಲಕ ತನ್ನನ್ನು ಗುರುತಿಸಿಕೊಳ್ಳಬೇಕು. ಈ ವೃತ್ತಿಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ಮಾತನಾಡುತ್ತಿದ್ದರು. ಮಾಧ್ಯಮದಲ್ಲಿ ಕಾರ್ಯನಿರ್ವಹಿಸಲು ಸಿಕ್ಕಿರುವುದು ಒಂದು ಅವಕಾಶ. ಅದನ್ನು ಸಮಾಜವನ್ನು ತಿದ್ದಲು ಬಳಸಿಕೊಳ್ಳಬೇಕು ಹೊರೆತು. ಬೇರೆಯದ್ದಕ್ಕಲ್ಲ ಎಂದರು.
ಸಂಘದಿಂದ ಪತ್ರಕರ್ತರ ಅನೇಕ ಸಮಸ್ಯೆಗಳ‌ ಪರಿಹಾರಕ್ಕೆ ಸಾಧ್ಯವಾಗಿದೆ. ಏನೇ ಸಮಸ್ಯೆಗಳಿದ್ದರೆ ಸಭೆಯಲ್ಲಿ ತಿಳಿಸಿ ಬಗೆಹರಿಸಿಕೊಳ್ಳೋಣ ಎಂದರು. 
ತರಬೇತಿ:
ಸುದ್ದಿಗೋಷ್ಟಿ ಎಂದೇ ಏನು, ಹೇಗೆ ಇರಬೇಕು, ಅದರಲ್ಲಿ ಪತ್ರಕರ್ತರ ಪ್ರಶ್ನೆ ಹೇಗಿರಬೇಕು. ಸುದ್ದಿಗೋಷ್ಟಿ ನಡೆಸುವವರಿಂದ ಹೆಚ್ಚಿನ ಮಾಹಿತಿ ಪಡೆಯುವುದು ಮುಖ್ಯವಾಗಿರಬೇಕು ಈ ನಿಟ್ಟಿನಲ್ಲಿ ಸಂವಾದ, ತರಬೇತಿಯನ್ನು ಆಯೋಜಿಸಲಿದೆಂದರು.
ಸಭೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ವೀರಭದ್ರಗೌಡ, ಜಿಲ್ಲಾ ಅಧ್ಯಕ್ಷ ಯಾಳ್ಪಿ ವಲಿಭಾಷ, ಪ್ರಧಾನ ಕಾರ್ಯದರ್ಶಿ ವಿ.ರವಿ ಕುಮಾರ್, ವಿಜಯನಗರ ಜಿಲ್ಲಾ ಅಧ್ಯಕ್ಷ ಪಿ. ಸತ್ಯನಾರಾಯಣ ಮೊದಲಾದವರು ಪಾಲ್ಗೊಂಡಿದ್ದರು.
ಸಂಘದ ಸದಸ್ಯರು, ಕಾರ್ಯಕಸರಿ ಸಮಿತಿ ಸದಸ್ಯರು  ತಮ್ಮ ತಮ್ಮ ಸಮಸ್ಯೆಗಳ‌ ಬಗ್ಗೆ ರಾಜ್ಯದ ಅಧ್ಯಕ್ಷರ ಗಮನಕ್ಕೆ ತಂದರು.