ಪತ್ರಕರ್ತರ ವಿರುದ್ದದ ಪ್ರಕರಣ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಚಿಂಚೋಳಿ,ಸೆ.23- ತಾಲೂಕಿನ ವಸತಿ ಶಾಲೆಯೊಂದರದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ ಯಾದಗಿರಿ ಎಕ್ಸಪ್ರೆಸ ದಿನಪತ್ರಿಕೆಯ ಸಂಪಾದಕರು ಮತ್ತು ವರದಿಗಾರರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ನೆತೃತ್ವದಲ್ಲಿ ಇಲ್ಲಿನ ತಹಸಿಲ್ ಕಾರ್ಯಾಲಯದ ಎದುರುಗಡೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಕೈಗೊಳ್ಳಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕಿನ ಹಿರಿಯ ಪತ್ರಕರ್ತರಾದ ಶಾಮರಾವ ಓಂಕಾರ್, ಮತ್ತು ರವಿಶಂಕರರೆಡ್ಡಿ ಮುತ್ತಂಗಿ, ಹಾಗೂ ಜಗನ್ನಾಥ ಶೇರಿಕಾರ, ಅವರು, ವರದಿಗಾರರ ಮೇಲೆ ದಾಖಲಿಸಿರುವ ಪ್ರಕರಣ ತನಿಖೆ ಕೈಗೊಂಡು, ಸಂತ್ರಸ್ಥರಿಂದ ಈ ಪ್ರಕರಣದ ನೈಜತೆಯನ್ನು ಪರಿಶೀಲಿಸಿ ಪತ್ರಿಕೆಗಳಲ್ಲಿನ ವರದಿ ಅಲ್ಲವಾಗಿರುವುದರಿಂದ ಈ ಪ್ರಕರಣ ಕೈಬಿಟ್ಟು ಇಬ್ಬರು ಪತ್ರಕರ್ತರನ್ನು ದೋಷ ಮುಕ್ತರನ್ನಾಗಿಸಿ ಬಿ.ರಿಫೋರ್ಟ್ ಅಂತಿಮ ವರದಿಯಲ್ಲಿ ಪತ್ರಕರ್ತರ ಹೆಸರನ್ನು ಕೈಬಿಡಬೇಕು ಎಂದು ಅವರು ಮನವಿ ಮಾಡಿದರು.
ಸಾಮಾಜದ ಚಿಂತಕÀರಾದ ಪತ್ರಕರ್ತರ ಮೇಲೆ ಮಾನವೀಯ ನೆಲೆಗಟ್ಟಿನಲ್ಲಿ ಅವರು, ಸಮಾಜ ಸೇವೆ ಹಾಗೂ ಸರಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಪತ್ರಕರ್ತರ ವಿರುದ್ಧಯಾವುದೇ ಕಾನೂನು ಕ್ರಮ ಕೈಕೊಳ್ಳಬಾರದೆಂದು ಮತ್ತು ಅವರನ್ನು ಬಂಧಿಸಬಾರದೆಂದು ಪ್ರತಿಭಟನೆಯ ಮೂಲಕ ಮನವಿ ಪತ್ರವನ್ನು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪತ್ರಕರ್ತರದ ಎಂಪಿ.ರಾಮರಾವ ಕುಲಕರ್ಣಿ, ಶಿವರಾಜ ವಾಲಿ, ಮೋಯಿಜ ಪಟೇಲ್, ಸಂಜೀವಕುಮಾರ ಪಾಟೀಲ, ಮಹೆಬೂಬ ಶಾ, ಅಣವಾರ್, ಶೇಖ ಬಖಿಯಾರ ಜಹಾಗೀರದಾರ, ರಾಜೇಂದ್ರ ಪ್ರಸಾದ, ವೀರಭದ್ರಪ್ಪ ರಾಯಪಲ್ಲಿ, ಲಿಂಗರಾಜ ಸ್ವಾಮಿ, ಸೈಯದ ವಸೀಮ ಪಟೇಲ, ಚಾಂದಪಾಶಾ, ರಾಜಕುಮಾರ ಮಿರಿಯಾಣ, ಸುಮಂತ ಸಂಗದ, ವೆಂಕಟೇಶ ದುದ್ಯಾಲ, ಇದ್ದರು.