ಪತ್ರಕರ್ತರ ವತಿಯಿಂದ ಮಿನಾಜ್‍ಗೆ ಸನ್ಮಾನ

ಗುಳೇದಗುಡ್ಡ, ಮೇ16: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆಯವ ಮೂಲಕ ಜಿಲ್ಲೆಗೆ ಹಾಗೂ ಗುಳೇದಗುಡ್ಡ ಪಟ್ಟಣಕ್ಕೆ ಕೀರ್ತಿ ತಂದ ಮಿನಾಜ್ ಕುರುಡಗಿ ಅವರ ಸಾಧನೆ ಮುಂಬರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಪತ್ರಕರ್ತ ರವಿ ಅಂಗಡಿ ಹೇಳಿದರು.
ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದ ಮಿನಾಜ್ ಕುರಡಗಿ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಮಾತನಾಡಿ, ಮಿನಾಜ್ ಅವರ ಸಾಧನೆಯಿಂದ ವಿದ್ಯಾರ್ಥಿಗಳು ಸ್ಪೂರ್ತಿಪಡೆದು ಪಟ್ಟಣದ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಲಿ, ಮಿನಾಜ್ ಅವರು ಉನ್ನತ ಶಿಕ್ಷಣ ಪಡೆದು ತಂದೆ ತಾಯಿ, ಊರಿನ ಕೀರ್ತಿ ಹೆಚ್ಚಿಸಲಿ. ಬಾಲಕಿಯ ಉನ್ನತ ವ್ಯಾಸಂಗಕ್ಕೆ ಸಹಾಯ, ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಕಾಶ ಗಾಯದ, ಸುರೇಶ ವಗ್ಗಾ, ಹುಚ್ಚೇಶ ಯಂಡಿಗೇರಿ, ಅಕ್ತರಹುಸೇನ ಅಪಘಾನ, ಕಿರಣಕುಮಾರ ಭಾಪ್ರಿ, ಬಸವಾರಾಜ ಸಿಂದಗಿಮಠ, ಮಹಾಲಿಂಗೇಶ ಯಂಡಿಗೇರಿ, ವಿದ್ಯಾರ್ಥಿಯ ತಂದೆ ಮಹಿಬೂಬ ಕುರುಡಗಿ, ಮಲ್ಲಿಕಾರ್ಜುನ ಆಲೂರ ಮತ್ತಿತರರು ಇದ್ದರು.