ಪತ್ರಕರ್ತರ ಮೇಲೆ ಹಲ್ಲೆ: ಆರೋಪಿ ಬಂಧನಕ್ಕೆ ಆಗ್ರಹ

ಲಿಂಗಸುಗೂರು,ಮಾ.೦೯- ತಾಲೂಕಿನ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಾಪೂರಹಟ್ಟಿ ಗ್ರಾಮದಲ್ಲಿ ಮಾ. ೬ ರಂದು ನಡೆದಿದ್ಧ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಭೆಯ ವರದಿಗೆ ತೆರಳಿದ್ದ ಮುದಗಲ್ ಹೋಬಳಿಯ ವಿಜಯವಾಣಿ ದಿನಪತ್ರಿಕೆ ವರದಿಗಾರ ಶರಣಯ್ಯ ಓಡೆಯರ್ ಹಾಗೂ ದಿ ಡೈಲಿ ನ್ಯೂಸ್ ಪತ್ರಿಕೆಯ ವರದಿಗಾರ ಶಿವಶಂಕ್ರಯ್ಯ ಒಡೆಯರ್ ಇವರುಗಳ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಲಾ, ಪರಮೇಶ, ಪರಮತ, ಸಂಗಪ್ಪ, ಅಮರೇಶ ಮಹಾಂತಪ್ಪ, ಹನುಮಮ್ಮ ಅಮರೇಶ ಸೇರಿದಂತೆ ಇತರರು ಹಲ್ಲೆ ಮಾಡಿರುವದು ಖಂಡನೀಯ, ಸಂವಿಧಾನದ ತಾನೇ ಅಂಗವೆಂದೇ ಕರೆಯಲ್ಪಡುವ ಮಾಧ್ಯಮ ರಂಗದ ವರದಿಗಾರರ ಮೇಲೆ ಆಗಾಗ್ಗೆ ಹಲ್ಲೆಗಳು ನಡೆಯುತ್ತಿರುವುದು ಪತ್ರಕರ್ತರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಪರಿಣಾಮ ಪತ್ರಕರ್ತರು: ನಿರ್ಭೀತಿಯಿಂದ ವರದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ, ಉಭಯ ವರದಿಗಾರರ ಮೇಲೆ ಹಲ್ಲೆ ಮಾಡಿದ್ದಲ್ಲದೇ ದುಷ್ಕರ್ಮಿಗಳು ಜೀವ ಬೆದರಿಕ ಹಾಕಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಸಾರ್ವಜನಿಕವಾಗಿ ಪತ್ರಕರ್ಕದ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಐದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ೫೦ ಸಾವಿರ ರೂಪಾಯಿ ದಂಡವನ್ನು ತಧಿಸಬೇಕೆಂದು ಇತ್ತೀಚೆಗೆ ಸರ್ವೋಚ್ಚಿ ನ್ಯಾಯಾಲಯ ತೀರ್ಮಾನ ನೀಡುವ ಮುಖೇನ ಮಾಧ್ಯಮ ರಂಗದ ರಕ್ಷಣೆಗೆ ಧಾವಿಸಿದೆ.
ಆದರೆ, ಘಟನೆ ಜರುಗಿ ಮೂರು ದಿನಗಳು ಕಳೆದರೂ ಇದುವರೆಗೂ ಘಟ ಸ್ಥಳಕ್ಕೆ ಯಾವುದೇ ಪೋಲಿಸ್ ಅಧಿಕಾರಿ ಭೇಟಿ ನೀಡದೇ ಇರುವುದು ಪೋಲಿಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಹಲ್ಲಿಗೀಡಾದ ಪತ್ರಕರ್ತರ ಮೇಲೆ ಪ್ರತಿದೂರು ದಾಖಲಿಸಿರುವುದು ಅನ್ಯಾಯದ ಪರಮಾವಧಿಯಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಾಧ್ಯಮ ಸಮಿತಿಯ ಅಧ್ಯಕ್ಷರೂ ಆಗಿರುವ ತಾವುಗಳು ಕೂಡಲೇ ಪತ್ರಕರ್ತರ ಸಭೆ ಕರೆದು ರಕ್ಷಣೆಗೆ ಮುಂದಾಗಬೇಕು, ಹಲ್ಲೆಗೈದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪತ್ರಕರ್ತರ ಮೇಲೆ ದಾಖಲಾಗಿರುವ ಪ್ರತಿದೂರನ್ನು ಹಿಂಪಡೆಯಬೇಕು. ತಪ್ಪಿದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಾದ್ಯಂತ ಹೋರಾಟ ವಿಸ್ತರಿಸಲಾಗುವುದೆಂದು ಈ ಮೂಲಕ ತಿಳಿಸುತ್ತಿದ್ದೇವೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಹಾಯಕ ಆಯುಕ್ತರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ.ಕಾ.ಪ.ಸಂ ಅಧ್ಯಕ್ಷ ಗುರುರಾಜ್ ಗೌಡೂರ, ಎನ್ ಬಸವರಾಜ, ಅಮರೇಶ್ ಬಲ್ಲಟಗಿ, ಎಮ್.ಡಿ. ಖಾಜಾ ಹುಸೇನ್, ದುರಗಪ್ಪ ಹೊಸಮನಿ, ನಾಗರಾಜ ಗೊರೆಬಾಳ್, ಅಮರೇಶ್ ನಾಯಕ, ಘನಮಠಯ್ಯ, ಮಹ್ಮದ್ ಮುಸ್ತಾಫ್, ಹನುಮಂತ ಕನ್ನಾಳ, ಗೌತಮ್ ಕುಮಾರ್, ಯಲ್ಲಪ್ಪ ವಂದಲಿ, ಕಿಶೋರ್ ಮುತಾಲಿಕ್, ಪಂಪಾಪತಿ, ರವಿ ಕುಮಾರ್ ಸೂರ್ಯವಂಶಿ, ಬಸವರಾಜ ಈಚನಾಳ, ಮುದಗಲ್ ಪತ್ರಕರ್ತರು ಸೇರಿದಂತೆ ಇತರರಿದ್ದರು.