
ಮುದಗಲ್ : ಪಟ್ಟಣ ಸಮೀಪದ ಉಪ್ಪಾರನಂದಿಹಾಳ ಗ್ರಾ.ಪಂ. ವ್ಯಾಪ್ತಿಯ ಕನ್ನಾಪೂರಹಟ್ಟಿ ಗ್ರಾಮದ ಸಾರ್ವಜನಿಕ ಕಟ್ಟೆಯಲ್ಲಿ ಗ್ರಾ.ಪಂ. ವತಿಯಿಂದ ನಡೆಸಲಾದ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯ ಗ್ರಾಮ ಸಭೆಯ ಸುದ್ದಿ ಸಂಗ್ರಹಿಸಲು ಹೋದ ವಿಜಯವಾಣಿ ವರದಿಗಾರ ಶರಣಯ್ಯ ಒಡೆಯರ ಹಾಗೂ ಉದಯ ಕಾಲ ಪತ್ರಿಕೆ ವರದಿಗಾರ ಶಿವಶಂಕ್ರಯ್ಯ ಒಡೆಯರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಗ್ರಾಮಲೆಕ್ಕಾಧಿಕಾರಿಗಳ ಮೂಲಕ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಾಪೂರುಹಟ್ಟಿ ಗ್ರಾಮದಲ್ಲಿ ಸಭೆಯ ಚಿತ್ರಾವಳಿಗಳನ್ನು ಸೆರೆ ಹಿಡಿಯಲು ಹೋದಾಗ ಗ್ರಾ.ಪಂ.ಕಾರ್ಯದರ್ಶಿ, ನೋಡಲ್ ಅಧಿಕಾರಿ ಹಾಗೂ ಪಿಡಿಓ ಹಾಗೂ ಗ್ರಾ.ಪಂ. ಶಕುಂತಲಾ ಪರಮಣ್ಣ ಹಾಗೂ ಕಾರ್ಯದರ್ಶಿಗಳು ಫಲಾನುಭವಿಗಳ ಪಟ್ಟಿಯನ್ನು ಬಿಳಿ ಹಾಳಿಯಲ್ಲಿ ಬರೆದು ಸಾರ್ವಜನಿಕರ ರುಜುವನ್ನು ರಿಜಿಸ್ಟರ್ ಪುಸ್ತಕದಲ್ಲಿ ಮಾಡಿಸುತ್ತಿರುವದನ್ನು ಗಮನಿಸಿದ ವರದಿಗಾರರು ಭಾವಚಿತ್ರ ತೆರೆಯಲು ಹೋದಾಗ ಈ ಬಗ್ಗೆ ಅಲ್ಲಿದ್ದ ಅಧಿಕಾರಿಗಳನ್ನು ಮಾಹಿತಿ ಕೇಳುತ್ತಿರುವಾಗ ಸ್ಥಳದಲ್ಲಿದ್ದ ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ಪರಮೇಶ ಮತ್ತು ಅವರ ಪತಿ ಪರಮಣ್ಣ ಸಂಗಪ್ಪ, ಅಮರೇಶ ಮಹಾಂತಪ್ಪ ಹಾಗೂ ಹನುಮಮ್ಮ ಅಮರೇಶ ಈ ನಾಲ್ಕು ಜನ ಸೇರಿ ಇಬ್ಬರು ವರದಿಗಾರರಿಗೆ ಸಾರ್ವಜನಿಕ ಸ್ಥಳದಲ್ಲಿ ಮಾರಣಾಂತಿಕ ಹಲ್ಲೆ ಮಾಡಿ ಜೀವ ಭಯ ಹಾಕಿದ್ದಾರೆ.
ಘಟನೆ ಕುರಿತು ಮುದಗಲಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ಮಾದ್ಯಮದ ವರದಿಗಾರರು ಭಯದ ವಾತಾವರಣದಲ್ಲಿ ಜೀವನ ಮತ್ತು ಕಾರ್ಯ ಚಟುವಟಿಕೆ ನಡೆಸಬೇಕಾಗಿದೆ ಆರೋಪಿಗಳನ್ನು ಬಂಧಿಸಿ ವರದಿಗಾರರ ಮೇಲೆ ದಾಖಲಾಗಿರುವ ಸುಳ್ಳು ಪ್ರತಿ ದೂರು ರದ್ದುಪಡಿಸಿ ಆರೋಪಿ ಗಳನ್ನು ಗಡಿಪಾರು ಮಾಡಿ ವರದಿಗಾರರಿಗೆ ನೈಜ ಸುದ್ದಿಗಳನ್ನು ಬರೆಯಲು
ಅನುಕೂಲ ಮಾಡಿ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಹನುಮಂತ ನಾಯಕ, ರಾಘವೇಂದ್ರ ಗುಮಾಸ್ತೆ,ದೇವಣ್ಣ ಕೋಡಿಹಾಳ,ಶರಣಪ್ಪ ಆನೆಹೊಸೂರು ,ಅಮ್ಜದ್ ಕಂದಗಲ್, ದೇವಪ್ಪ ರಾಠೋಡ, ಶಶಿಧರ ಕಂಚಿಮಠ, ,ಬಸವರಾಜ ಹೂನೂರು, ಬಸವರಾಜ ಆಶಿಹಾಳ ಮಂಜುನಾಥ ಕುಂಬಾರ,ವಾಹಿದ್ ಖುರಿಷಿ,ಸುರೇಶ ಪತ್ತಾರ ,ಉಪಸ್ಥಿತರಿದ್ದರು