ಪತ್ರಕರ್ತರ ನೇತ್ರ ತಪಾಸಣೆ

ಕಲಬುರಗಿ ನ 4: ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ಮತ್ತು ನಗರದ ದೃಷ್ಠಿ ನೇತ್ರ ಆಸ್ಪತ್ರೆ ಸಹಯೋಗದಲ್ಲಿ ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಕರ್ತರಿಗಾಗಿ ಉಚಿತ ಕಣ್ಣು ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಹಲವಾರು ಪತ್ರಕರ್ತರ ನೇತ್ರ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.
ಜಿಪಂ ಸಿಇಓ ಡಾ. ಪಿ ರಾಜಾ ಅವರು ಶಿಬಿರಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವೆಂದ್ರಪ್ಪ ಅವಂಟಿ,ದೇವೇಂದ್ರಪ್ಪ ಕಪನೂರ್,ರಾಜು ದೇಶಮುಖ,ಗೋಪಾಲರಾವ್ ಕುಲಕರ್ಣಿ ,ಬಾಬುರಾವ್ ಯಡ್ರಾಮಿ,ರಾಘವೇಂದ್ರರಾವ್ ದೇಸಾಯಿ,ಸಂಗಮನಾಥ ರೇವತಗಾಂವ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು.