ಪತ್ರಕರ್ತರ ಜೊತೆ ವಾಗ್ವಾದ ನಡೆಸಿದ ಪೂಲೀಸ್ ಪೇದೆ

ಮುದ್ದೇಬಿಹಾಳ:ಡಿ.25: ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಾಲಯ ಆವರಣ ಶಾಲೆಯ ಮತಗಟ್ಟೆಗಯಲ್ಲಿ ಚುನಾವಣಾ ವರದಿ ಮಾಡಲು ಆಗಮಿಸಿದ ಪತ್ರಕರ್ತರ ಜೊತೆ ಓರ್ವ ಪೂಲೀಸ್ ಪೇದೆ ಮುಲ್ಲಾ ಎನ್ನುವವರು ವಾಗ್ವಾದಕ್ಕೆ ಇಳಿದ ಘಟನೆ ನಡೆಯಿತು

ಬಸರಕೋಡ ಮತಕ್ಷೇತ್ರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣದಲ್ಲಿ ಮಧ್ಯೆ ಮತದಾನ ನಡೆದಿದ್ದು ಬೆಳಗ್ಗೆ ಎರಡು ಮೂರು ಬಾರಿ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಘರ್ಷಣೆ ಗಳು ನಡೆದಿರುವ ಮಾಹಿತಿ ಆದಾರÀದ ಮೇಲೆ ವರದಿಗೆ ಮಾಡಲು ಬಂದ ಪತ್ರಕರ್ತ ಜೊತೆ ಮುಲ್ಲಾ ಎನ್ನುವ ಪೇದೆಯು ಏಕಾಏಕಿ ಬಾಯಿಗೆ ಬಂದಂತೆ ಏಕ ವಚನದಲ್ಲಿ ನಿಂದಿಸುತ್ತಿರುವುದನ್ನು ಸಹಿಸಿಕೊಳ್ಳದÀ ಪತ್ರಕರ್ತರು ವಾಗ್ವಾದ ನಡೆಸಿದರು ಘಟನೆ ನಡೆಯಿತು, ಈ ಸಂದರ್ಭದಲ್ಲಿ ಮತ ಚಲಾಯಿಸಲು ಬಂದ ಮತದಾರರು ಪೇದೆ ಬುದ್ದಿ ಹೇಳುಲು ಯತ್ನಿಸಿದರು ಪೇದೆ ತನ್ನದೆಯಾದ ವಿತಂಡವಾದ ಮುಂದುವರೆಸಿದರು ಇದು ಪತ್ರಕರ್ತ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು, ಮತಗಟ್ಟೆಗಳತ್ತ ಹಲವಾರು ಜನರು ವಾಹನಗಳನ್ನು, ಬೈಕ್ ಗಳನ್ನು ತಂದರು ಸುಮ್ಮನಿದ್ದ ಪೇದೆ ಪತ್ರಕರ್ತರ ಎರಡು ನಿಮಿಷ ವರದಿ ಸಂಗ್ರಹಿಸಿ ತೇರಳುತ್ತೇವೆ ಎಂದು ವಿನಂತಿಸಿದರು ಅಹಂಕಾರದ ಮಾತುಗಳನ್ನು ಆಡಿದ ,ಇದಕ್ಕೆ ಜಗ್ಗದ ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪೇದೆ ಮಾತನಾಡಿದ ವಿಡಿಯೋ ಕಳಸಿ ಕ್ರಮಕ್ಕೆ ಆಗ್ರಹಿಸಿದರು, ಸ್ಥಳಕ್ಕೆ ದೌಡಾಯಿಸಿ ಬಂದ ತಹಶಿಲ್ದಾರ ಎಂ ಎಸ್ ಅರಕೇರಿ ಪೇದೆಗೆ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿ ಕಳುಹಿಸಿದರು.